Saturday, May 18, 2024
spot_imgspot_img
spot_imgspot_img

2% ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಆಗಸ್ಟ್ 23 ರಿಂದ ಶಾಲಾ ಕಾಲೇಜು ಪ್ರಾರಂಭ; ಸಿಎಂ ಬೊಮ್ಮಾಯಿ ಘೋಷಣೆ

- Advertisement -G L Acharya panikkar
- Advertisement -

ಬೆಂಗಳೂರು: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆ ಇದೆಯೋ, ಆ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಒಂದು ವೇಳೆ ಕೊರೊನಾ ಪ್ರಕರಣಗಳ ಸಂಖ್ಯೆ ವರದಿಯಾದಂತ ಶಾಲೆಗಳನ್ನು ಬಂದ್ ಮಾಡಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಒಂದನೇ ಅಲೆ ಕಡಿಮೆಯಾದಾಗ ದಿನಕ್ಕೆ 200-300 ಇರ್ತಿತ್ತು.. ಎರಡನೇ ಅಲೆ ಕಡಿಮೆಯಾದ ಮೇಲೂ 1800 ಕೇಸಸ್ ಬರ್ತಾ ಇದಾವೆ ಎಂದಿದ್ದಾರೆ. ಮುಂದುವರೆದು ಯಾವ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಿದೆ ಅಲ್ಲಿ ಶಾಲೆಗಳನ್ನು ತೆರೆಯುವುದು ಬೇಡ.. 2 ಪರ್ಸೆಂಟ್​​ಗಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಶಾಲೆ ಪ್ರಾರಂಭ ಆದ ನಂತರ 2 ಪರ್ಸೆಂಟ್ ಮೇಲೆ ಹೋದ್ರೆ 1 ವಾರ ಶಾಲೆ ಕ್ಲೋಸ್ ಮಾಡಿ ಮತ್ತೆ ಓಪನ್ ಮಾಡುವ ಕುರಿತು ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.

ಕೋವಿಡ್ ಪ್ರಕರಣ ಹೆಚ್ಚಿರುವ ದಕ್ಷಿಣ ಕನ್ನಡ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮತ್ತೆ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಮುಂದುವರೆಸಲು ತೀರ್ಮಾನಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ಯೂ ಅವಧಿ ವಿಸ್ತರಣೆ ಮಾಡದಿರಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಿಎಂ ಬೊಮ್ಮಾಯಿ ಹೇಳಿದ್ದೇನು..?

  • ನಮ್ಮ ಮುಂದೆ 2 ನೇ ಅಲೆಯ ಸವಾಲು ಇನ್ನೂ ಇದೆ.
  • ವಿದ್ಯಾರ್ಥಿಗಳ ಪೋಷಕರು ಲಸಿಕೆ ಪಡೆದಿರಬೇಕು..
  • ಶಾಲೆಯ ಶಿಕ್ಷಕ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು.
  • ಜೀನೋಮ್ ಟೆಸ್ಟಿಂಗ್ ಲ್ಯಾಬ್​ಗಳನ್ನು ನಿರ್ಮಿಸಲು ನಿರ್ಧರಿಸಿದ್ದೇವೆ.
  • ಜಿಲ್ಲಾವಾರು ಕೋವಿಡ್ ನಿರ್ವಹಣೆಗೆ ಸೂಚನೆ ನೀಡಿದ್ದೇವೆ.
  • 14 ಲಕ್ಷದಷ್ಟು ವ್ಯಾಕ್ಸಿನ್ ನಮ್ಮ ರಾಜ್ಯದಲ್ಲಿ ಇದೆ.
  • ಮಕ್ಕಳಿಗಾಗಿ ಐಸಿಯು, ಬೆಡ್ ತಯಾರಿಗೆ ಸೂಚನೆ ನೀಡಿದ್ದೇವೆ.
  • ಸೆಪ್ಟೆಂಬರ್ 23 ರಂದು 9 ರಿಂದ 12 ನೇ ತರಗತಿವರೆಗೆ ಶಾಲೆ ತೆರೆಯಲು ಎಸ್​ಓಪಿ ತಯಾರಿಸಲಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡ್ತೇವೆ.
  • ಕೇರಳ ಸರಿಯಾಗಿ ಕೊರೊನಾ ನಿಯಂತ್ರಣ ಮಾಡದಿರುವುದರಿಂದ ನಮಗೂ ತೊಂದರೆಯಾಗಿದೆ.
  • ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನ ತೆರೆಯಲ್ಲ.
driving
- Advertisement -

Related news

error: Content is protected !!