Friday, June 27, 2025
spot_imgspot_img
spot_imgspot_img

ಸ್ಕೂಟಿಗೆ ಕಾರು ಡಿಕ್ಕಿ; ಯುವತಿ ಗಂಭೀರ..!

- Advertisement -
- Advertisement -

ವೇಗವಾಗಿ ಬಂದ ಕಾರೊಂದು ಹಿಂಬದಿಯಿಂದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಯುವತಿ 50 ಮೀಟರ್ ಹಾರಿ ಬಿದ್ದು ಗಂಭೀರ ಗಾಯಗೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಯುವತಿ ಬೆಳಗಾವಿಯ ಬ್ರಹ್ಮನಗರ ನಿವಾಸಿ ದಿವ್ಯಾ ಸುಜಯ್ ಪಾಟೀಲ್ (23) ಎಂದು ಗುರುತಿಸಲಾಗಿದೆ.

ವೇಗವಾಗಿ ಬಂದ ಕಾರು ಹಿಂಬದಿಯಿಂದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಸ್ಕೂಟಿ ಜೊತೆಗೆ ಮುಂದಿದ್ದ ಮತ್ತರೆಡು ಕಾರುಗಳಿಗೂ ಗುದ್ದಿದೆ. ಸರಣಿ ಅಪಘಾತದ ಪರಿಣಾಮ ಸ್ಕೂಟಿ ಪೀಸ್ ಪೀಸ್ ಆಗಿದ್ದು, ಮೂರೂ ಕಾರುಗಳು ಜಖಂಗೊಂಡಿದೆ. ಗಾಯಾಳು ದಿವ್ಯಾ ಬೆಳಗಾವಿಯ ಮಜಂಗಾವ ಕಡೆಯಿಂದ ಪೀರನವಾಡಿ ಕಡೆಗೆ ಹೊರಟಿದ್ದರು. ಈ ವೇಳೆ ಕಾರು ಚಾಲಕ ಭರತ್ ಚೌಗಲೆ ಎಂಬಾತನಿಂದ ಸರಣಿ ಅಪಘಾತ ನಡೆದಿದೆ. ಸ್ಕೂಟಿ ಹಾಗೂ ಕಾರುಗಳ ನಡುವಿನ ಸರಣಿ ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ದಿವ್ಯಾ ಪಾಟೀಲ್ ಅವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಬೆಳಗಾವಿ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!