- Advertisement -
- Advertisement -
ಮಂಗಳೂರು:- ಗುಡ್ಡಕೊಪ್ಳ ಕಡಲ ಕಿನಾರೆಗೆ ಪುತ್ತೂರು ಕಡೆಯಿಂದ ವಿಹಾರಕ್ಕೆ ಬಂದ ಯುವಕರು ಸ್ಥಳೀಯ ಮೊಗವೀರರ ಎಚ್ಚರಿಕೆಗೂ ಗಮನ ಕೊಡದೆ ಕಡಲಲ್ಲಿ ಈಜಿತ್ತಿರುವಾಗ ಕಡಲ ಸೆಳೆಯು ಅವರನ್ನು ಕಡಲ ಮದ್ಯದಲ್ಲಿ ಮುಳುಗಿದ್ದ ಡ್ರಜ್ಜರ್ ಕಡೆಗೆ ಎಳೆದುಕೊಂಡು ಹೋಯಿತು, ಯುವಕ ಡ್ರಜ್ಜರನ್ನು ಹಿಡಿದು ಸಹಾಯಕ್ಕೆ ಅಂಗಲಾಚುತ್ತಿದ್ದಾಗ, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಆಗಲಿ ಕರಾವಳಿ ರಕ್ಷಣಾ ಪಡೆಗಾಗಲಿ ಡ್ರಜ್ಜರ್ ಕಡೆಗೆ ಹೋಗಿ ಯುವಕನನ್ನು ರಕ್ಷಿಸಲು ಅಸಾಧ್ಯವಾದಾಗ ಸ್ಥಳೀಯ ವೀರಮೊಗವೀರ ಯುವಕರಾದ ಯಾದವ ಶ್ರೀಯಾನ್ ಮತ್ತು ಸುಮನ್ ರವರು ಈಜುತ್ತಾ ಡ್ರಜರ್ ಕಡೆಗೆ ಹೋಗಿ ಯುವಕನನ್ನು ಹಿಡಿದು ದಡಕ್ಕೆ ತಲುಪಿಸಿ ಬದುಕಿಸಿ ಸಾಹಸ ಮೆರೆದಿದ್ದಾರೆ, ಮೊಗವೀರ ಯುವಕರ ಸಾಹಸಕ್ಕೆ ಅನೇಕರು ಪ್ರಶಂಸೆ ವಕ್ತಪಡಿಸಿದ್ದಾರೆ.
- Advertisement -