Thursday, July 23, 2026
spot_imgspot_img
spot_imgspot_img

ಸುಳ್ಯ: ಮೊಬೈಲ್ ಬಳಕೆಯ ವಿಚಾರವಾಗಿ ತಾಯಿ ಬುದ್ದಿಮಾತು; ಮನೆಬಿಟ್ಟು ಬಾಲಕ ನಾಪತ್ತೆ- ಪ್ರಕರಣ ದಾಖಲು

- Advertisement -
- Advertisement -

ಸುಳ್ಯ: ಮೊಬೈಲ್ ಬಳಕೆಯ ವಿಚಾರವಾಗಿ ತಾಯಿ ಬುದ್ದಿಮಾತು ಹೇಳಿದ ಬಳಿಕ ಮನೆಯಿಂದ ಹೊರಹೋದ 16 ವರ್ಷದ ಬಾಲಕ ನಾಪತ್ತೆಯಾಗಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಪ್ರದೇಶದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿಯಾಗಿರುವ ಸಲ್ಮಾ(40) ಅವರು ನೀಡಿದ ದೂರಿನ ಪ್ರಕಾರ, ಪ್ರಸ್ತುತ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆಯಲ್ಲಿ ವಾಸವಾಗಿದ್ದು, ಮೇ 30ರಂದು ಬೆಳಿಗ್ಗೆ ಅವರ ಪುತ್ರ ಸೈಯದ್ ಆಲಿ ಸೈಯದ್ ಗೌಸ್(16) ಮೊಬೈಲ್ ನೋಡುತ್ತಿದ್ದ ವಿಚಾರಕ್ಕೆ ತಾಯಿ ಬುದ್ದಿಮಾತು ಹೇಳಿದ್ದರು.

ಇದಾದ ಕೆಲವೇ ಹೊತ್ತಿನಲ್ಲಿ ಸೈಯದ್ ಆಲಿ ಮನೆಯಿಂದ ಹೊರಗೆ ತೆರಳಿದ್ದು, ಬಳಿಕ ಮನೆಗೆ ಮರಳಿಲ್ಲ. ಕುಟುಂಬಸ್ಥರು, ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಬಾಲಕನ ಸುಳಿವು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 73/2026, ಕಲಂ 137(2) ಬಿಎನ್‌ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!