Saturday, May 18, 2024
spot_imgspot_img
spot_imgspot_img

ಹಸಿರುಮಯವಾದ ವಾರಿಧಿ : ಪ್ರಕೃತಿಯ ಮತ್ತೊಂದು ಕೌತುಕ

- Advertisement -G L Acharya panikkar
- Advertisement -

ಕಾರವಾರ: ಸಮುದ್ರದ ನೀರು ನೀಲಿ ಆದದ್ದಾಯಿತು. ಈಗ ಹಸಿರು ಬಣ್ಣದ ಸರದಿ. ಕಾರವಾರ ನಗರದ ಬೈತಖೋಲ್ ಮೀನುಗಾರಿಕಾ ಬಂದರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳಿಂದ ಸಮುದ್ರದ ನೀರು ತಿಳಿ ಹಸಿರು ಬಣ್ಣಕ್ಕೆ ತಿರುಗಿದೆ. ಇದು ಕುತೂಹಲಕ್ಕೆ ಕಾರಣವಾಗಿದೆ.

ಪ್ರತಿವರ್ಷ ಮಳೆಗಾಲ ಮುಗಿದು ಸುಮಾರು ಒಂದು ತಿಂಗಳ ನಂತರ ಇಂತಹ ವಿದ್ಯಮಾನ ಕಂಡುಬರುತ್ತದೆ. ಸಮೀಪದ ಗೋವಾ ಭಾಗದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಸಮುದ್ರದಲ್ಲಿ ನೀರು ಹಸಿರಾದ ಬಗ್ಗೆ ವರದಿಯಾಗಿದೆ.

ಕೆಲವು ದಿನಗಳಿಂದ ಈ ಭಾಗದಲ್ಲಿ ಪ್ಲಾಂಕ್ಟನ್‌ಗಳೆಂಬ ಸೂಕ್ಷ್ಮಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವು ಒಂದೇ ಕಡೆ ಭಾರೀ ಸಂಖ್ಯೆಯಲ್ಲಿ ಸೇರಿದಾಗ ನೀರಿನ ಬಣ್ಣ ಬದಲಾಗುತ್ತದೆ. ನೀರಿನ ಹರಿವು ಶುರುವಾದಾಗ ತಿಳಿಯಾಗುತ್ತದೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಹೇಳಿದ್ದಾರೆ.

- Advertisement -

Related news

error: Content is protected !!