Saturday, June 28, 2025
spot_imgspot_img
spot_imgspot_img

ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ; ಆರು ಉಗ್ರರ ಸಹಿತ ಶಸ್ತ್ರಾಸ್ತ್ರಗಳು ವಶಕ್ಕೆ..!

- Advertisement -
- Advertisement -

ಚುರಾಚಂದಪುರ: ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆ ಕಾಂಗ್ರೇಪಕ್ ಕಮ್ಯುನಿಸ್ಟ್ ಪಾರ್ಟಿಯ ಆರು ಉಗ್ರರನ್ನು ಬಂಧಿಸಲಾಗಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಬಂಧಿತರು ಅಕ್ರಮ ಶಸ್ತ್ರಾಸ್ತ್ರ ವಹಿವಾಟು ಮತ್ತು ಸಾರ್ವಜನಿಕರು ಹಾಗೂ ಸರ್ಕಾರಿ ಕಚೇರಿಗಳಿಂದಲೂ ಸುಲಿಗೆ ಮಾಡುತ್ತಿದ್ದರು. ಬಂಧಿತರಿಂದ 4 ಕಾರು, 2 ಬೈಕ್ ಮತ್ತು ಅನೇಕ ಮೊಬೈಲ್ ಫೋನ್ ಸೇರಿದಂತೆ ಸುಮಾರು 4 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚುರಾಚಂದಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬಂದೂಕುಗಳು, ಎರಡು ಎಲೆಕ್ನಿಕ್ ಡಿಟೋನೇಟರ್‌ಗಳು, ಮ್ಯಾಗಜೀನ್ ಜೊತೆಗೆ 9 ಎಂಎಂ ಪಿಸ್ತೂಲ್ ಹಾಗೂ ಮೂರು ಹ್ಯಾಂಡ್ ಗ್ರೆನೇಡ್‌ಗಳನ್ನೂ ಪತ್ತೆಹಚ್ಚಲಾಗಿದೆ. ಲಾಮ್ಹಾಂಗ್ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಶೋಧ ಕಾರ್ಯಾಚರಣೆ ವೇಳೆ 303 ರೈಫಲ್, ಸಿಂಗಲ್ ಬ್ಯಾರೆಲ್ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -

Related news

error: Content is protected !!