Friday, March 29, 2024
spot_imgspot_img
spot_imgspot_img

ವಿಟ್ಲ: ಬಯಲಾಯ್ತು ರೋಹಿಣಿ ಅಲಿಯಾಸ್ ರೂಪಾಳ ಅಸಲಿ ವಿರೂಪ..! ಲಕ್ಷ ಲಕ್ಷ ಹಣವನ್ನು ದುಪ್ಪಟ್ಟು ಮಾಡಿ ಕೊಡುತ್ತೇನೆಂದು ಪಂಗನಾಮ ಹಾಕಿದ ಬಾಕಿಲದ ಮಹಿಳೆ

- Advertisement -G L Acharya panikkar
- Advertisement -
vtv vitla

ಇಲ್ಲೊಬ್ಬಳು ಖತರ್ನಾಕ್ ಮಹಿಳೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಪೊಲೀಸರ ಮೋಸ್ಟ್ ವಾಟೆಂಡ್ ಲಿಸ್ಟ್’ಗೆ ಸೇರಿದ್ದಾಳೆ. ನೋಡೋಕೆ ತೆಳ್ಳಗೆ ಬೆಳ್ಳಗೆ ಇದ್ರು ಈಕೆ ಮಾಡುವ ಕೆಲಸ ನಿಜಕ್ಕೂ ದಂಗಾಗಿಸುವ0ತಿದೆ. ಗ್ರಾಮೀಣ ಭಾಗದಲ್ಲಿ ಇದ್ದುಕೊಂಡೆ ಐನಾತಿ ಕೆಲಸ ಮಾಡಿ ಗ್ರಾಮೀಣ ಮಹಿಳೆಯರಿಗೆ, ಕೃಷಿಕರಿಗೆ, ಗೃಹಿಣಿಯರಿಗೆ ಲಕ್ಷಾಂತರ ರೂಪಾಯಿ ಹಣ ಇನ್’ವೆಸ್ಟ್ ಮಾಡಿ ಹಣ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿ ಪಂಗನಾಮ ಹಾಕಿದ ಘಟನೆ ನಡೆದಿದೆ.

ಅನಂತಾಡಿ ಗ್ರಾಮದ ಬಾಕಿಲ ನಿವಾಸಿಯಾಗಿರುವ ರೋಹಿಣಿ ಅಲಿಯಾಸ್ ರೂಪ ಆರೋಪಿ. ಪುತ್ತೂರಿನಲ್ಲಿ ಜಿಶು ಕಾಸ್ಮೆಟಿಕ್ ಸೆಂಟರ್ ಹೊಂದಿರುವ ಈಕೆ ಹಣದ ಆಸೆ ತೋರಿಸಿ ಪಂಗನಾಮ ಹಾಕಿದ್ದಾಳೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೋಸಹೋದ ಮಹಿಳೆಯೊಬ್ಬರು ರೋಹಿಣಿ ಅಲಿಯಾಸ್ ರೂಪ ಸಿ ವಿರುದ್ಧ ದೂರು ನೀಡಿದ್ದಾರೆ.

CRR EDUCATION PALANINIG INVESTMENT ನಲ್ಲಿ ಹಣ ಇಡುವಂತೆ ಒತ್ತಾಯ ಮಾಡಿ ಅದರಂತೆ ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಶರವು ಪಡ್ಡು ಎಂಬಲ್ಲಿ ದಿನಾಂಕ: 27-06-2021 ರಿಂದ ದಿನಾಂಕ:04-11-2021 ರವರೆಗೆ ರೋಹಿಣಿ ಸಿ @ರೂಪರವರೊಂದಿಗೆ ಒಟ್ಟು 5,00,000/ರೂ ಹಣ ವ್ಯವಹಾರ ಮಾಡಿದ್ದಾರೆ. 1,50,000/ ರೂ ಹಣಕ್ಕೆ ಬೇರೆ ಬೇರೆ ರಶೀದಿಯನ್ನು ನೀಡಿದ್ದು ಉಳಿದ ಹಣಕ್ಕೆ ಯಾವುದೇ ರಶೀದಿಯನ್ನು ನೀಡದೆ ಮೋಸಗೊಳಿಸಿದ್ದಾಳೆ.

ಒಟ್ಟು 5 ಲಕ್ಷ ಹಣದಲ್ಲಿ ರೂಪ ಕೇವಲ 1,10,000 ವಾಪಸ್ಸು ಮಾಡಿದ್ದಾಳೆ. ಉಳಿದ 3,90,000 ಮೊತ್ತವನ್ನು ದೂರುದಾರರು ಹಾಗೂ ಅವರ ಅಕ್ಕನ ಮಗ ರೂಪಾಳ ಮನೆಗೆ ಹೋಗಿದ್ದಾರೆ. ಆಗ ಕಿಂಚಿತ್ತೂ ಹೆದರದ ರೂಪ ನಾನು ಉಳಿದ ಹಣ ನಿನಗೆ ಕೊಡುವುದಿಲ್ಲ. ನೀನು ಏನು ಬೇಕಾದರೂ ಮಾಡು ಎಂದು ಧಮ್ಕಿ ಹಾಕಿದ್ದಾಳೆ. CRR EDUCATION PALANINIG INVESTMENT ನಲ್ಲಿ ಹಣ ಇಡುವಂತೆ ಒತ್ತಾಯ ಮಾಡಿ ಹಣ ಕೊಟ್ಟಾಗ ಅದಕ್ಕೆ ಯಾವುದೇ ಮೂಲ ಸ್ವೀಕೃತಿ ನೀಡದೇ ಕೊಟ್ಟ ಹಣವನ್ನು ನೀಡದೆ ಮೋಸ ಮಾಡಿರುವುದಾಗಿದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಳೀಯರು ಏನಾಂತಾರೆ..?
ಐನಾತಿ ರೂಪಾಳ ಮುಖವಾಡದ ರೂಪವನ್ನು ನಂಬಿ ಅದೆಷ್ಟೋ ಮಂದಿ ಹಣ ಆಕೆಯ ಕೈಗೆ ಕೊಟ್ಟಿದ್ದಾರೆ. ಆದರೆ ಸಾಕ್ಷಿ ಇಲ್ಲದೆ ಸುಮ್ಮನಾಗಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಆಕೆಯ ಕುಟುಂಬಸ್ಥರಿಗೆ ಆಕೆ ಮೋಸ ಮಾಡಿದ್ದಾಳೆ ಎಂಬ ಆರೋಪವೂ ಇದೆ. ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಈಕೆಗೆ ವಿವಿಧ ವಲಯಗಳಿಂದ ಸಂಪರ್ಕ ಇದೆ ಎಂಬ ಮಾತುಗಳೂ ಇದೆ. ಹಲವರೊಂದಿಗೆ ಕೈ ಜೋಡಿಸುವ ಈಕೆಯ ಹಿಂದೆ ಮೋಸದ ದೊಡ್ಡ ಜಾಲವೇ ಇದೆ ಎಂಬ ಶಂಕೆಯಿದೆ. ದುಡಿಯುವ ವರ್ಗದಿಂದ ಮೋಸ ಮಾಡಿ ಹಣಗಳಿಸಿ ದೊಡ್ಡ ಮನೆಯನ್ನೂ ಈಕೆ ನಿರ್ಮಿಸಿದ್ದಾಳೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇಷ್ಟು ಮಾತ್ರವಲ್ಲದೆ ಕಟ್ಟಿದ ಹಣವನ್ನು ವಾಪಸ್ಸು ಕೇಳಲು ಹೋದಾಗ ನಿಮ್ಮ ಮೇಲೆ ಅತ್ಯಾಚಾರ, ಜೀವಬೆದರಿಕೆ ಕೇಸು ಹಾಕಿಸುತ್ತೇವೆ. ಹೆಸರು ಬರೆದು ಆತ್ಮಹತ್ಯೆ ಮಾಡುತ್ತೇನೆಂದೆಲ್ಲಾ ಆವಾಜ್ ಹಾಕಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ.

ರೂಪ ಅಲಿಯಾಸ್ ರೋಹಿಣಿಯ ಈ ಖತರ್ನಾಕ್ ಕೆಲಸದ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಮೋಸ ಹೋದವರು ಹಿಡಿ ಶಾಪ ಹಾಕುತ್ತಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಹಾಗೂ ಈಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸಾರ್ವಜನಿಕ ವಲಯದಿಂದ ಭಾರೀ ಒತ್ತಡ ಬರುತ್ತಿದೆ.

vtv vitla
suvarna gold
- Advertisement -

Related news

error: Content is protected !!