





ವಿಟ್ಲ ಸಮೀಪದ ಉಕ್ಕುಡ ಬದ್ರಿಯಾ ಜುಮಾ ಮಸೀದಿ ಇದರ 2025-27ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಸಂಘಟಕ ಮುನೀರ್ ದರ್ಬೆ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಮಸೀದಿ ಗೌರವಾಧ್ಯಕ್ಷರಾದ ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಉಕ್ಕುಡ ಮಸೀದಿಯಲ್ಲಿ ನಡೆದ ಜಮಾಅತ್ ಸರ್ವ ಸದಸ್ಯರ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಪ್ರದಾನ ಕಾರ್ಯದರ್ಶಿಯಾಗಿ ಅಶ್ರಫ್ ಅಲಿ ನೆಕ್ಕರೆಕಾಡು, ಕೋಶಾಧಿಕಾರಿಯಾಗಿ ಮಹಮ್ಮದ್ ಟಿ.ಕೆ. ಟೋಪ್ಕೋ ಅವರನ್ನು ಆರಿಸಲಾಯಿತು.ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಡಿ.ಕೆ ಹಾಗೂ ಕೆ.ಎಸ್. ರಾಝಿಕ್, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಆಲಂಗಾರು ಹಾಗೂ ಮಹಮೂದ್ ಕಾನ, ಕಾರ್ಯಕಾರೀ ಸಮಿತಿ ಸದಸ್ಯರಾಗಿ ಶರೀಫ್ ತ್ವೈಬಾ, ಅದ್ದು ಬುಡಾಲ್ತಡ್ಕ, ರಶೀದ್ ವಿಟ್ಲ, ಶರೀಫ್ ಡ್ರೈಫಿಶ್, ಅಬ್ದುಲ್ಲ ಕುಂಞಿ ಒಪ್ಪ, ಡಿ.ಎಂ. ಅಬ್ದುಲ್ ರಹಿಮಾನ್ ದರ್ಬೆ, ಮೂಸಕುಂಞಿ ಆಲಂಗಾರು, ಸಿಕಂದರ್ ಆಲಂಗಾರು ಸಹಿತ 15 ಮಂದಿ ಸದಸ್ಯರ ಆಡಳಿತ ಸಮಿತಿ ಅಸ್ತಿತ್ವಕ್ಕೆ ತರಲಾಯಿತು. ಲೆಕ್ಕ ಪರಿಶೋಧಕರಾಗಿ ಡಿ.ಎಂ. ರಶೀದ್ ದರ್ಬೆ ಹಾಗೂ ಹಾರಿಸ್ ಬುಡಾಲ್ತಡ್ಕ ಅವರನ್ನು ಆರಿಸಲಾಯಿತು.