- Advertisement -
- Advertisement -



ಕಬಕ ಶ್ರೀ ಮಹಾದೇವಿ ಮಹಿಳಾ ಮಂಡಳಿ ಇದರ ಸಹಕಾರದೊಂದಿಗೆ ದಿನಾಂಕ : 23/02/2025ರಂದು ಆದಿತ್ಯವಾರ ಕಬಕ ಶ್ರೀ ಮಹಾದೇವಿ ಕಲಾ ಮಂದಿರದಲ್ಲಿ ದೇವಸ್ಥಾನ ಅಧ್ಯಕ್ಷರು ವಿ. ಚಂದ್ರಶೇಖರ ನಾಯ್ಕ್ ಇವರ ನೇತೃತ್ವದಲ್ಲಿ ಶ್ರೀ ಮಹಾದೇವಿ ಮಹಿಳಾ ಕುಣಿತಾ ಭಜನಾ ತಂಡ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.

ಇದರ ನೂತನ ಅಧ್ಯಕ್ಷರಾಗಿ ಸುಜಾತ ನೆಕ್ರಾಜೆ ಕಾರ್ಯದರ್ಶಿಯಾಗಿ ಸ್ನೇಹ ನೆಕ್ಕರೆ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಭೆಯ ವೇದಿಕೆಯಲ್ಲಿ ಶ್ರೀ ಮಹಾದೇವಿ ದೇಸ್ಥಾನದ ಕಾರ್ಯದರ್ಶಿ ಜತ್ತಪ್ಪ ಗೌಡ ಅಡ್ಯಾಲು,ಕೋಶಾಧಿಕಾರಿ ರವೀಂದ್ರ ಕಲ್ಲಂದಡ್ಕ, ಶ್ರೀ ಮಹಾದೇವಿ ಉತ್ಸವ ಸಮಿತಿ ಅಧ್ಯಕ್ಷರು ಧರ್ನಪ್ಪ ಸೀಗೆತ್ತಾಡಿ, ಶ್ರೀ ಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷರು ರೇಷ್ಮಾ ನೆಕ್ಕರೆ, ಕಾರ್ಯದರ್ಶಿ ಸೌಮ್ಯ ಮೂವಳ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Advertisement -