Monday, May 6, 2024
spot_imgspot_img
spot_imgspot_img

ಉಡುಪಿ ಜಿಲ್ಲೆ ಪ್ರವೇಶಿಸಿದಂತೆ ಶರಣ್ ಪಂಪ್ ವೆಲ್‌ಗೆ ನಿರ್ಬಂಧ

- Advertisement -G L Acharya panikkar
- Advertisement -

ಉಡುಪಿ: ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ ಸಮಾರಂಭ ಹಾಗೂ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್‌ಗೆ ಹೈಕೋರ್ಟ್‌ ಆದೇಶದಂತೆ ಉಡುಪಿ ಜಿಲ್ಲೆ ಪ್ರವೇಶಿಸಕ್ಕೆ ನಿರ್ಬಂಧ ವಿಧಿಸಲಾಗಿದೆ.

ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ ಸಮಾರಂಭದ ಹಿನ್ನಲೆ ಉಡುಪಿ ಎಂಜಿಎಂ ಕ್ರೀಡಾಂಗಣದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮುಖಂಡ ಶರಣ್ ಪಂಪ್ ವೆಲ್ ಭಾಗವಹಿಸಲು ಉಡುಪಿಗೆ ತೆರಳಿದ್ದರು. ಆದರೆ ಈ ಹಿಂದೆ ಪ್ರಚೋದನಾಕಾರಿ ಭಾಷಣ ಹಿನ್ನೆಲೆ ಶರಣ್ ಪಂಪ್ ವೆಲ್ ಮೇಲೆ ಉಡುಪಿಯಲ್ಲಿ ಸುಮೋಟೊ ಕೇಸ್‌ ಆಗಿರುವುದರಿಂದ ಸದ್ಯ ಷರತ್ತುಬದ್ದ ಜಾಮೀನಿನಲ್ಲಿರೋ ಶರಣ್ ಪಂಪ್‌ವೆಲ್‌ ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಪೊಲೀಸರು ಉಡುಪಿಗೆ ಪ್ರವೇಶಿದಂತೆ ನಿರ್ಬಂಧ ಹೇರಿದ್ದಾರೆ. ಈ ಹಿನ್ನಲೆ ಪೊಲೀಸರ ಆದೇಶದಂತೆ ಉಡುಪಿಗೆ ತೆರಳದೇ ಹೆಜಮಾಡಿಯಿಂದಲೇ ವಾಪಾಸಾಗಿದ್ದಾರೆ.

- Advertisement -

Related news

error: Content is protected !!