Friday, May 17, 2024
spot_imgspot_img
spot_imgspot_img

ಮಗನ ತಪ್ಪಿಗೆ ಅಪ್ಪನಿಗೆ ಶಿಕ್ಷೆ; ಕುಸಿದ ಕಿಂಗ್​ ಖಾನ್​​ ಶಾರುಖ್ ಬ್ರಾಂಡ್ ವ್ಯಾಲ್ಯೂ..!

- Advertisement -G L Acharya panikkar
- Advertisement -
driving

ಐಷಾರಾಮಿ ಹಡಗೊಂದರಲ್ಲಿ ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದ ಮೇರೆಗೆ ನಟ ಶಾರುಖ್​​ ಪುತ್ರ ಆರ್ಯನ್​​ ಖಾನ್​​ನನ್ನು ಬಂಧಿಸಲಾಗಿದೆ. ಈಗಾಗಲೇ ಆರ್ಯನ್​​ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​ ಕೂಡ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಇನ್ನು, ಎರಡು ವಾರಗಳ ಕಾಲ ಆರ್ಯನ್​​ ಖಾನ್​​ ಜೈಲಿನಲ್ಲೇ ಇರಬೇಕಾಗಿದೆ. ಹೀಗಿರುವಾಗಲೇ ನಟ ಶಾರುಖ್​​ ಖಾನ್​​ ಬ್ರಾಂಡ್​​ ವ್ಯಾಲ್ಯೂ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೌದು, ನಟ ಶಾರುಖ್​​ ಪುತ್ರ ಬಂಧನವಾಗುತ್ತಿದ್ದಂತೆಯೇ ಇವರ ಬ್ರಾಂಡ್​​ ವ್ಯಾಲ್ಯೂ ಕಡಿಮೆ ಆಗುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಜನ ಸೋಷಿಯಲ್​​ ಮೀಡಿಯಾದಲ್ಲಿ ಬೈಕಾಟ್​​​​ ಶಾರುಖ್​​ ಖಾನ್​​ ಎಂದು ಕ್ಯಾಂಪೇನ್​​ ಮಾಡುತ್ತಿದ್ದಾರೆ. ಹೀಗಾಗಿ ಶಾರುಖ್​​​ ಖಾನ್​​​ ನಟಿಸಿದ್ದ ಎಲ್ಲಾ ಜಾಹೀರಾತು ನಿಲ್ಲಿಸಲಾಗುತ್ತಿದೆ.

ಭಾರತದ ಪ್ರತಿಷ್ಠಿತ ಎಜುಕೇಷನ್​​​ ಸಂಸ್ಥೆ​​ ಬೈಜೂಸ್​ ಶಾರುಖ್​​ ನಟಿಸಿದ್ದ ಎಲ್ಲಾ ಜಾಹೀರಾತಿಗೂ ತಡೆ ನೀಡಿದೆ. ಸುಮಾರು ವರ್ಷಕ್ಕೆ 4-5 ಕೋಟಿ ರೂಪಾಯಿ ಇದರಿಂದ ಶಾರುಖ್​​ಗೆ ಲಾಸ್​​ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಇನ್ನು ಹಲವು ಕಂಪನಿಗಳು ಕೂಡ ಇದೇ ಕೆಲಸ ಮಾಡುತ್ತಿವೆ ಎನ್ನಲಾಗುತ್ತಿದೆ.

ಬ್ರಾಂಡ್​​ ವ್ಯಾಲ್ಯೂ ಎಂದರೇನು?
ಬಾಲಿವುಡ್​​​ ಖ್ಯಾತ ನಟ ಶಾರುಖ್​​ ಖಾನ್​​ ಸುಮಾರು 40ಕ್ಕೂ ಹೆಚ್ಚು ಕಂಪನಿಗಳ ಬ್ರಾಂಡ್​​ ಅಂಬ್ಯಾಸಿಡರ್​​​​ ಆಗಿದ್ದಾರೆ. ಸುಮಾರು ಇವರ ಬ್ರಾಂಡ್​​​ ವ್ಯಾಲ್ಯೂ ಆದಾಯ ಬರೋಬ್ಬರಿ 378 ಕೋಟಿ ರೂಪಾಯಿ ಇದೆ ಎನ್ನಲಾಗಿದೆ.

ಶಾರೂಖ್ ಖಾನ್‌ಗೆ ಬೈಜೂಸ್ ಜಾಹೀರಾತು ದೊಡ್ಡ ಆದಾಯವಾಗಿತ್ತು. ಇದರ ಜೊತೆ ಹ್ಯೂಂಡಾಯ್, ಎಲ್‌ಜಿ(LG) , ದುಬೈ ಟೂರಿಸಂ, ಐಸಿಐಸಿಐ ಹಾಗೂ ರಿಲಯನ್ಸ್ ಜಿಯೋಗೆ ಶಾರೂಖ್ ಜಾಹೀರಾತು ನೀಡುತ್ತಿದ್ದರು. ಶಾರೂಖ್ ಜಾಹೀರಾತಿಗಾಗಿ ಎಲ್ಲಾ ಕಂಪನಿಗಳು ಸುಮಾರು 4 ಕೋಟಿ ನೀಡುತ್ತಿದ್ದವು ಎನ್ನಲಾಗಿದೆ.

ಶಾರುಖ್​​​ ಮಗನ ಸುತ್ತ ವಿವಾದ ಇರುವ ಕಾರಣ ಹಲವು ಕಂಪನಿಗಳು ನಟನೊಂದಿಗೆ ಜಾಹೀರಾತು ಒಪ್ಪಂದ ಮುಂದುವರಿಸಲು ಇಷ್ಟಪಡುತ್ತಿಲ್ಲ ಎನ್ನಲಾಗಿದೆ. ಇನ್ನು ಕೆಲವು ಕಂಪನಿಗಳು ತಮ್ಮ ಪ್ಲಾನ್​​ಗಳನ್ನು ಮುಂದೂಡಿವೆ. ಕೆಲವು ಕಂಪನಿಗಳು ನಟನನ್ನು ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ಕೈಬಿಡುವ ನಿರ್ಧಾರ ಮಾಡಿವೆ ಎಂದು ಹೇಳುತ್ತಿವೆ ಮೂಲಗಳು.

driving
- Advertisement -

Related news

error: Content is protected !!