Wednesday, June 17, 2026
spot_imgspot_img
spot_imgspot_img

ವಿಕಾಸ್ ದುಬೆ ಪತ್ನಿಗೆ ಜಾರಿ ನಿರ್ದೇಶನಾಲಯ ನೋಟಿಸ್

- Advertisement -
- Advertisement -

ನವದೆಹಲಿ: ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿಯಾದ ವಿಕಾಸ್ ದುಬೆ ಪತ್ನಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ಲಕ್ನೋ ಸಮೀಪ ನಡೆದ ಎನ್ ಕೌಂಟರ್ ನಲ್ಲಿ ವಿಕಾಸ್ ದುಬೆ ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

ಮಧ್ಯಪ್ರದೇಶದ ಉಜ್ಜೈನಿ ದೇವಸ್ಥಾನದ ಬಳಿ ವಿಕಾಸ್ ದುಬೆಯನ್ನು ಬಂಧಿಸಿ ಲಕ್ನೋಗೆ ಕರೆದೊಯುತ್ತಿದ್ದ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನ ನಡೆಸಿದ್ದ. ಈ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಪೊಲೀಸರು ದಾಳಿ ನಡೆಸಿದ್ದರು ಎಂಬುದು ಸರ್ಕಾರದ ವಾದ. ಈ ಸಂಬಂಧ ತನಿಖೆಗೆ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿದೆ.

ಈ ಬೆಳವಣಿಗೆ ಮಧ್ಯೆ ವಿಕಾಸ್ ದುಬೆ ಪತ್ನಿ ರಿಚಾ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ವಿಕಾಸ್ ದುಬೆ ಪತ್ನಿಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.

- Advertisement -

Related news

error: Content is protected !!