Monday, July 4, 2022
spot_imgspot_img
spot_imgspot_img

ಕಡಜಲು ಹುಳುಗಳ ದಾಳಿ : ತಂದೆ ಮುಂದೆಯೇ ಅಸುನೀಗಿದ ಮಗ

- Advertisement -
- Advertisement -

ಶಿವಮೊಗ್ಗ: ಕಾಡುಪ್ರಾಣಿ ದಾಳಿಯಿಂದ, ಹಾವಿನಿಂದ ಸಾವಿಗೀಡಾಗುವುದನ್ನು ನಾವು ಈವರೆಗೆ ನೋಡಿದ್ದೇವೆ. ಇಲ್ಲೊಂದು ದುರಂತ ಘಟನೆ ಜರುಗಿದೆ. ಹುಲಿ ಕಡಜಲು ಹುಳ ಕಚ್ಚಿ ಮಗ ತನ್ನ ತಂದೆಯ ಕಣ್ಣೆದುರೇ ಕೊನೆಯುಸಿರೆಳೆದಿದ್ದಾನೆ.ಈ ಘಟನೆ ಕಿಗಡಿ ಗ್ರಾಮದಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಕಿಗಡಿಯ ಜಯರಾಮ್ ಗೌಡ ಎಂಬುವರ ಮಗ ಅಭಿಷೇಕ್(35) ಮೃತ ವ್ಯಕ್ತಿ. ಅಭಿಷೇಕ್ ಬೆಂಗಳೂರಿನಲ್ಲಿ ನೆಲೆಸಿದ್ದರು. ಲಾಕ್​ಡೌನ್​ನಿಂದಾಗಿ ಊರಿಗೆ ಮರಳಿ ಇಲ್ಲೇ ಇದ್ದರು.

ಈ ವೇಳೆ ಅಡಿಕೆ ಗೊನೆ ಕೀಳುವಾಗ ಏಕಾಏಕಿ ಹುಲಿ ಕಡಜಲು ಹುಳಗಳು ದಾಳಿ ನಡೆಸಿದ್ದು. ಪರಿಣಾಮ ಹುಳುಗಳ ಮುಳ್ಳಿನ ವಿಷವೇರಿ ಬಾಯಿಯಲ್ಲಿ ನೂರೆ ಬಂದು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾದರೂ ಮಾರ್ಗ ಮಧ್ಯೆ ತಂದೆಯ ಮುಂದೆಯೇ ಮಗ ಸಾವಿಗೀಡಾಗಿದ್ದಾನೆ.

- Advertisement -

Related news

error: Content is protected !!