Friday, July 11, 2025
spot_imgspot_img
spot_imgspot_img

ಶಿರ್ವ: ಪೊಷಕರೊಂದಿಗೆ ಬಟ್ಟೆ ಅಂಗಡಿಗೆ ಬಂದ ಎರಡುವರೆ ವರ್ಷದ ಮಗು ಬಾವಿಗೆ ಬಿದ್ದು ಮೃತ್ಯು!

- Advertisement -
- Advertisement -

ಶಿರ್ವ: ಪೊಷಕರ ಜೊತೆ ಬಟ್ಟೆ ಅಂಗಡಿಗೆ ಬಂದ ಪುಟ್ಟ ಮಗುವೊಂದು ಆಟವಾಡುತ್ತ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ಮುದರಂಗಡಿಯ ಪೇಟೆಯಲ್ಲಿ ಶನಿವಾರ ಸಂಜೆ ನಡೆದಿದೆ.

ಮೃತ ಬಾಲಕಿ ಅದಮಾರು, ವಾಜಪೇಯಿ ನಗರದ ಜಯಲಕ್ಷ್ಮೀ ಮತ್ತು ಕೃಷ್ಣ ದಂಪತತಿಗಳ ಎರಡುವರೇ ವರ್ಷದ ಪ್ರಿಯಾಂಕ ಎಂದು ತಿಳಿದು ಬಂದಿದೆ.

ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಬಟ್ಟೆಯಂಗಡಿಗೆ ಪೋಷಕರೊಂದಿಗೆ ಬಂದ ಮಗು ಅಂಗಡಿಯ ಹೊರಗೆ ಆಟವಾಡುತ್ತ ಅಲ್ಲೇ ಪಕ್ಕದಲ್ಲಿ ಅಪೂರ್ಣ ಆವರಣ ಗೋಡೆ ಇದ್ದ ಬಾವಿಗೆ ಬಿದ್ದಿತ್ತು.

ತಾಯಿ ಬಟ್ಟೆ ಖರಿದೀಸಿ ಹೊರಗೆ ಬಂದಾಗ ಮಗು ಕಾಣದೆ ಗಾಬರಿಗೊಂಡು ಅಂಗಡಿ ಮಾಲಕರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಹುಡುಕಾಟ ನಡೆಸಿದಾಗ ಅಲ್ಲೇ ಪಕ್ಕದ ಬಾವಿಯಲ್ಲಿ ಮಗುವಿನ ಬ್ಯಾಗ್ ಮತ್ತು ಹೂ ಕಾಣಿಸಿದೆ.

ತಕ್ಷಣ ಸ್ಥಳೀಯರು ಹಾಗೂ ಶಿರ್ವ ಪೊಲೀಸರು ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಮಗು ಆದಾಗಲೇ ನೀರಿನಲ್ಲಿ ಮುಳುಗಿ ಮೃತ ಪಟ್ಟಿದೆ ಎಂದು ತಿಳಿದು ಬಂದಿದೆ.

driving
- Advertisement -

Related news

error: Content is protected !!