Saturday, June 27, 2026
spot_imgspot_img
spot_imgspot_img

ಬೋರ್ ವೇಲ್ ರಿಪೇರಿ ಮಾಡಲು ಹೋಗಿ ಸ್ಥಳದಲ್ಲೇ ಇಬ್ಬರು ಸಾವು!

- Advertisement -
- Advertisement -

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ತಮ್ಮ ಜಮೀನಿನಲ್ಲಿ ಬೋರ್ ವೇಲ್ ರಿಪೇರಿ ಮಾಡಲು ಹೋಗಿ ವಿದ್ಯುತ್ ಶಾಕ್ ತಗುಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟ ಘಟನೆ ನಡೆದಿದೆ.

ಮೃತ ವ್ಯಕ್ತಿಗಳನ್ನು ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಬಿ ‌ಕ್ಯಾಂಪ್ ನ ನಿವಾಸಿಗಳಾದ ಶಶಿಕುಮಾರ್ ನಾಯ್ಕ್ (32) ಶೇಖರ್‌ ನಾಯ್ಕ್ (36)ಎಂದು ಗುರುತಿಸಿದ್ದಾರೆ.

ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದ ಇಬ್ಬರು ವ್ಯಕ್ತಿಗಳು ಜಮೀನಿನಲ್ಲಿ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!