- Advertisement -
- Advertisement -





ಶಿವಮೊಗ್ಗ: ನವಜಾತ ಗಂಡು ಶಿಶು ಪತ್ತೆಯಾದ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಮಲ್ಲಾಪುರದ ಗ್ರಾಮದ ಬಳಿ ನಡೆದಿದೆ.
ಸಾಸ್ವೆಹಳ್ಳಿ ಗ್ರಾಮದ ಕುಶ ಎಂಬವರು ತಮ್ಮದೊಡ್ಡಪ್ಪನ ಪುತ್ರನಿಗೆ ಆನಾರೋಗ್ಯದ ಕಾರಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹಿಂದಿರುವಾಗ ಸಮೀಪದ ಮಲ್ಲಾಪುರ ಗ್ರಾಮದ ಬಳಿ ಮಗು ಅಳುವ ಶಬ್ದ ಕೇಳಿಸಿದೆ. ಬಳಿಕ ತಮ್ಮ ಅತ್ತಿಗೆ ಸಹಾಯದೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ 2-3 ದಿನದ ಗಂಡು ಮಗು ಪತ್ತೆಯಾಗಿದೆ.
ಸುತ್ತಮುತ್ತಲಿನ ಮನೆಗಳಲ್ಲಿ ವಿಚಾರಿಸಿದಾಗ ಆ ಮಗುವು ಯಾರಿಗೂ ಸಂಬಂಧಪಟ್ಟಿಲ್ಲ ಎಂಬುದನ್ನು ದೃಢಪಡಿಸಿಕೊಂಡ ಅವರು ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ.
- Advertisement -








