Thursday, June 4, 2026
spot_imgspot_img
spot_imgspot_img

‘ಶೂಟರ್ ದಾದಿ’ ಚಂದ್ರೋ ತೋಮರ್ ಕೋವಿಡ್ ಗೆ ಬಲಿ!

- Advertisement -
- Advertisement -

ಮೀರತ್: ‘ಶೂಟರ್ ದಾದಿ’ ಎಂದು ಖ್ಯಾತವಾಗಿದ್ದ ಶೂಟರ್ ಚಂದ್ರೋ ತೋಮರ್(89) ಕೋವಿಡ್ -19ರ ಕಾರಣದಿಂದಾಗಿ ನಿಧನರಾದರು.

driving

ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಈ ವಾರದ ಆರಂಭದಲ್ಲಿ ಮೀರತ್‌ನ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಅವರ ನಿಧನಕ್ಕೆ ಕೇಂದ್ರ ಮಂತ್ರಿಗಳಿಂದ ಹಿಡಿದು ಚಲನಚಿತ್ರ ನಟರವರೆಗಿನ ವಿವಿಧ ವರ್ಗದ ಜನರು ಸಂತಾಪ ಸೂಚಿಸಿದ್ದಾರೆ.

ಮೊದಲ ಬಾರಿಗೆ ಬಂದೂಕನ್ನು ಎತ್ತಿಕೊಂಡಾಗ ಚಂದ್ರೊ ಈಗಾಗಲೇ 60 ಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರು. ಆದರೆ ಅನೇಕ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದರು. ಅಲ್ಲದೆ , ಬಾಲಿವುಡ್ ಚಲನಚಿತ್ರ ಒಂದಕ್ಕೆ ಸಹ ಸ್ಫೂರ್ತಿಯಾಗಿದ್ದರು. ಅವರು ವಿಶ್ವದ ಅತ್ಯಂತ ಹಿರಿಯ ಮಹಿಳಾ ಶಾರ್ಪ್ ಶೂಟರ್ ಎಂದು ನಂಬಲಾಗಿತ್ತು. ಅವರು ತಮ್ಮ ಸಹೋದರಿ ಪ್ರಕಾಶಿ ತೋಮರ್ ಅವರೊಂದಿಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಭಾರತದ ರಾಷ್ಟ್ರಪತಿಗಳು ಸ್ವತಃ ನೀಡಿದ್ದ ಸ್ತ್ರೀ ಶಕ್ತಿ ಸನ್ಮಾನ್ ಸೇರಿದಂತೆ ಹಿರಿಯ ನಾಗರಿಕ ವಿಭಾಗದಲ್ಲಿ ಶೂಟರ್ ದಾದಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕುಟುಂಬದಲ್ಲಿ ಕಿರಿಯ ಸದಸ್ಯರೊಬ್ಬರು ತಮ್ಮ ಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಶೂಟಿಂಗ್ ರೇಂಜ್ ನಲ್ಲಿ ತಮ್ಮನ್ನು ದಾಖಲಿಸಲು ಕೇಳಿದ ನಂತರ ಅವರು ಅಚ್ಚರಿ ಎಂಬಂತೆ ರೈಫಲ್ ಅನ್ನು ಕೈಗೆತ್ತಿಕೊಂಡಿದ್ದರು.

- Advertisement -

Related news

error: Content is protected !!