- Advertisement -
- Advertisement -
ಕಲ್ಲಡ್ಕ: ಶ್ರೀರಾಮ ಪದವಿ ಕಾಲೇಜ್ ಕಲ್ಲಡ್ಕ ದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ” ಮಾನಸಿಕ ಆರೋಗ್ಯದೆಡೆಗೆ – ನಮ್ಮ ನಡಿಗೆ ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ನಡೆಯಿತು.

ಡಾl.ಅನನ್ಯ ಲಕ್ಷ್ಮಿ ಸಂದೀಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭ ಮತ್ತು ಅದರ ಪರಿಹಾರಕ್ಕಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ದೃಶ್ಯ ಮಾಧ್ಯಮದ ಮೂಲಕ ಮಂಡಿಸಿದರು.

ಸಂಚಾಲಕರಾದ ವಸಂತ ಮಾಧವ ಅಧ್ಯಕ್ಷತೆ ವಹಿಸಿದ್ದರು. ಪದವಿ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಪ್ರೇಮ ಮಾಣಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುಕನ್ಯಾ , ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿಗಳಾದ ಯತಿರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನವ್ಯ ಪ್ರಥಮ ಬಿಕಾಂ ಸ್ವಾಗತಿಸಿ, ಸುಷ್ಮಾ ದ್ವಿತೀಯ ಬಿಕಾಂ ವಂದಿಸಿ, ಅಂತಿಮ ವರ್ಷದ ಮಧುರ ಕಾರ್ಯಕ್ರಮ ನಿರೂಪಿಸಿದರು.


- Advertisement -








