- Advertisement -
- Advertisement -
ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರಸಿದ್ಧ ಮಠಗಳಲ್ಲಿ ಒಂದಾದ ಹುಬ್ಬಳ್ಳಿ ಸಿದ್ದಾರೂಢ ಮಠದಲ್ಲಿ ಮಂಗಳವಾರದಿಂದ ಭಕ್ತರನ್ನು ನಿರ್ಬಂಧಿಸಲಾಗಿದೆ.

ಸರಕಾರದ ಆದೇಶದಂತೆ ಮಾರ್ಚಿನಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಮಾಡಲಾಗಿತ್ತು.ಲಾಕ್ ಡೌನ್ ತೆರವಿನ ನಂತರ ಮಠದ ಆಡಳಿತ ಮಂಡಳಿ ಸಿದ್ದಾರೂಢ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದರಿಂದ ವಿವಿಧ ಜಿಲ್ಲೆಗಳಿಂದ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು,ಆತಂಕಕ್ಕೆ ಕಾರಣವಾಗಿದ್ದು ಮಠದ ಆಡಳಿತ ಮಂಡಳಿ ಜು.7 ರಿಂದ ಮತ್ತೊಮ್ಮೆ ನಿರ್ಬಂಧ ಹಾಕಿದೆ. ಆದ್ದರಿಂದ ಭಕ್ತಾದಿಗಳು ಸಹಕರಿಸಬೇಕು ಎಂದು ಶ್ರೀ ಮಠದ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -