Friday, April 26, 2024
spot_imgspot_img
spot_imgspot_img

ನಗ್ರೋಟ್ ಭಯೋತ್ಪಾದಕರು ಪಾಕಿಸ್ತಾನಿಗಳು-ಸಾಕ್ಷ್ಯ ಸಮೇತ ಬಯಲು

- Advertisement -G L Acharya panikkar
- Advertisement -

ನವದೆಹಲಿ: ಮೊನ್ನೆ ರಕ್ಷಣಾ ಪಡೆ ನಗ್ರೋಟ ಬಳಿ ಕಾರ್ಯಾಚರಣೆ ನಡೆಸಿ ನಾಲ್ವರು ಭಯೋತ್ಪಾದಕರನ್ನ ಎನ್​ಕೌಂಟರ್ ಮಾಡಿತ್ತು. ಈ ವೇಳೆ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿತ್ತು.

ನಂತರ ಹೊಡೆದುರುಳಿಸದ ಉಗ್ರರು ಪಾಕಿಸ್ತಾನ ಮೂಲದವರು ಜೈಶ್ ಎ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರು ಅನ್ನೋ ಮಾಹಿತಿ ಲಭ್ಯವಾಗಿತ್ತು. ಇದೀಗ ಉಗ್ರರಿಂದ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳು ಹಾಗೂ ಜೊತೆಗಿದ್ದ ವಸ್ತುಗಳೆಲ್ಲಾ ಪಾಕಿಸ್ತಾನದ್ದೇ ಅನ್ನೋ ವಿಚಾರ ಬಹಿರಂಗವಾಗಿದೆ.

ಕಾರ್ಯಾಚರಣೆ ವೇಳೆ ಸೇನಾ ಪಡೆ ಡಿಜಿಟಲ್ ಮೊಬೈಲ್ ರೇಡಿಯೋ ಒಂದನ್ನ ವಶಪಡಿಸಿಕೊಂಡಿತ್ತು. ಇದು ಪಾಕಿಸ್ತಾನದ ಕಂಪನಿಯೊಂದು ತಯಾರಿಸಿದ ರೇಡಿಯೋ ಆಗಿದೆ. ಮೈಕ್ರೋ ಎಲೆಕ್ಟ್ರಾನಿಕ್ಸ್ ಮತ್ತು ಕ್ಯೂಮೊಬೈಲ್ ಸ್ಮಾರ್ಟ್‌ಫೋನ್ ತಯಾರಿಸಿದ ಡಿಜಿಟಲ್ ಮೊಬೈಲ್ ರೇಡಿಯೊ ವಶಪಡಿಸಿಕೊಳ್ಳಲಾಗಿದೆ.

ಕ್ಯೂಮೊಬೈಲ್ ಪಾಕಿಸ್ತಾನಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಮಾರ್ಕೆಟಿಂಗ್ ಕಂಪನಿಯದ್ದಾಗಿದೆ.ಉಗ್ರರ ಬಳಿಯಿದ್ದ ಮೊಬೈಲ್ ಕೂಡ ಪಾಕಿಸ್ತಾನದ್ದಾಗಿದೆ. ಜೊತೆಗೆ ಪಾಕ್​ನ ಮೆಡಿಸಿನ್ ಹಾಗೂ ಉಗ್ರರು ಧರಿಸಿದ್ದ ಶೂಗಳು ಕರಾಚಿಯಲ್ಲಿ ತಯಾರಿಗಿದ್ದವು.

ಉಗ್ರರು ಇಟ್ಟುಕೊಂಡಿದ್ದ ಬಹುತೇಕ ವಸ್ತುಗಳು ಮೇಡ್ ಇನ್ ಪಾಕಿಸ್ತಾನದ್ದು ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಇನ್ನು ‘ನೀವು ಎಲ್ಲಿಗೆ ತಲುಪಿದ್ದೀರಿ? ಪರಿಸ್ಥಿತಿ ಏನು? ಏನಾದರೂ ಸಮಸ್ಯೆ ಇದೆಯೇ?’ ಅಂತಾ ಪಾಕಿಸ್ತಾನದಿಂದ ಉಗ್ರರು ಟೆಕ್ಸ್ಟ್​ ಮೆಸೇಜ್ ಕಳುಹಿಸಿರೋದು ತನಿಖೆಯಿಂದ ತಿಳಿದುಬಂದಿದೆ ಅಂತಾ ವರದಿಯಾಗಿದೆ.

- Advertisement -

Related news

error: Content is protected !!