Tuesday, December 3, 2024
spot_imgspot_img
spot_imgspot_img

ಕೊರೋನಾ ಕಾರಣ-ಸರಳ ಜಂಬೂ ಸವಾರಿ

- Advertisement -
- Advertisement -

ಮೈಸೂರು: ಸರಳ ದಸರಾಮಹೋತ್ಸವದಲ್ಲಿ ಈ ಬಾರಿ ಜಂಬೂ ಸವಾರಿ ಮೆರವಣಿಗೆ 30ರಿಂದ 40 ನಿಮಿಷಗಳ ಒಳಗೆ ಮುಗಿಯಲಿದೆ ಎಂದು ಮೈಸೂರು ನಗರ ಪೋಲೀಸ್ ಕಮಿಷನರ್ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ಈ ಹಿಂದೆ ನಡೆಯುತ್ತಿದ್ದ ಐದಾರು ಕಿ ಮೀ ಗಳ ಜಂಬೂ ಸವಾರಿ ಈ ಬಾರಿ ಮುನ್ನೂರು ಮೀಟರ್ ಗಳವರೆಗೆ ಮಾತ್ರ ನಡೆಯಲಿದೆ.

ಕೊರೋನಾ ಕಾರಣದಿಂದ ಜಂಬೂ ಸವಾರಿ ಅರಮನೆಯ ಆವರಣದಲ್ಲಿ ನಡೆಯಲಿದೆ , ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಇಲ್ಲ.ಆ ದಿನ ಅರಮನೆ ಸುತ್ತಲಿರುವ ಎಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಕಲಾವಿದರು, ವೀರಗಾಸೆ, ಅಶ್ವಪಡೆ, ಸಾಂಸ್ಕೃತಿಕ ತಂಡ, ಸ್ತಬ್ದ ಚಿತ್ರದಲ್ಲಿ ಭಾಗವಹಿಸುವವರು ಸೇರಿ 300 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ದೂರದರ್ಶನದಲ್ಲಿ ನೇರ ಪ್ರಸಾರ ಇರಲಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!