Sunday, June 7, 2026
spot_imgspot_img
spot_imgspot_img

ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಲೆಗೈದ ಪಾಪಿ ಪತಿರಾಯ..!

- Advertisement -
- Advertisement -

ಪತ್ನಿಯ ರೀಲ್ಸ್ ಹುಚ್ಚು ಕಂಡು ಕೋಪಗೊಂಡ ಪತಿ ಆಕೆಯನ್ನು ಕೊಂದು ನಾಲೆಗೆ ಎಸೆದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಅರೆಕೆರೆ ಗ್ರಾಮದ ಪೂಜಾ(28) ಗಂಡನಿಂದ ಕೊಲೆಯಾದ ದುರ್ದೈವಿ. ಶ್ರೀನಾಥ್ (32) ಪತ್ನಿಯನ್ನು ಕೊಂದು ನಾಲೆಗೆ ಎಸೆದ ಆರೋಪಿ. ಪತ್ನಿಯ ಮೊಬೈಲ್ ರೀಲ್ಸ್ ಹುಚ್ಚಿನಿಂದ ರೋಸಿಹೋಗಿದ್ದ ಪತಿ, ಮೊಬೈಲ್ ಬಳಸದಂತೆ ಸಾಕಷ್ಟು ಬಾರೀ ಎಚ್ಚರಿಕೆ ನೀಡಿದ್ದನು. ಆದರೆ ಪತ್ನಿ ಪೂಜಾ ಇತ್ತೀಚಿಗೆ ಮೊಬೈಲ್ ನಲ್ಲಿ ಹೆಚ್ಚು ಕಾಲ ಹರಣ ಮಾಡುತ್ತಿದ್ದಳು. ಇದರಿಂದ ಅನೈತಿಕ ಸಂಬಂಧ ಇರುವ ಶಂಕೆ ಆತನಲ್ಲಿ ಮೂಡಿದೆ. ಇದರಿಂದಾಗಿ ಪತ್ನಿಯನ್ನು ಕೊಂದು ನಾಲೆಗೆ ಎಸೆದಿದ್ದಾನೆ.

ಪತ್ನಿ ಹತ್ಯೆ ನಂತರ ಆರೋಪಿ ಪತಿ ನಾಪತ್ತೆಯಾಗಿದ್ದು, ಮಹದೇವಪುರದ ನಾಲೆಯಲ್ಲಿ ಕೊಲೆಯಾಗಿದ್ದ ಪತ್ನಿ ಪೂಜಾ ಶವ ಪತ್ತೆಯಾಗಿದೆ. ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ,ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Related news

error: Content is protected !!