Wednesday, June 23, 2021
spot_imgspot_img
spot_imgspot_img

ವರ್ಷದ ಚೊಚ್ಚಲ ಸೂರ್ಯಗ್ರಹಣ; ಭಾರತದ ಯಾವೆಲ್ಲಾ ಭಾಗಗಳಲ್ಲಿ ಕಾಣಿಸಿಕೊಳ್ಳಲಿದೆ ಗೊತ್ತಾ?

- Advertisement -
- Advertisement -

ಈ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 10, 2021ರಂದು ಕಾಣಿಸಲಿದೆ. ಇದನ್ನು ಎಲ್ಲರೂ ನೋಡುವುದಿಕ್ಕೆ ಸಾಧ್ಯವಿಲ್ಲ ಎಂದು ನಾಸಾ ಹೇಳಿದೆ. ಜಗತ್ತಿನ ಕೆಲವೇ ಭಾಗದಲ್ಲಿ ಮಾತ್ರ ಈ ಗ್ರಹಣ ಗೋಚರ ಆಗಲಿದೆ. ಭೂಮಿ ಹಾಗೂ ಸೂರ್ಯನ ಮಧ್ಯೆ ಚಂದ್ರ ಹಾದು ಹೋಗುವಾಗ ಈ ಸೂರ್ಯ ಗ್ರಹಣ ಸಂಭವಿಸುತ್ತದೆ. ಅಂದಹಾಗೆ ಸೂರ್ಯನನ್ನು ಚಂದ್ರ ಸಂಪೂರ್ಣವಾಗಿ ಮರೆ ಮಾಡುವುದಿಲ್ಲ. ಈ ಸೂರ್ಯ ಗ್ರಹಣದ ದೃಶ್ಯವು ಬೆಂಕಿಯ ಉಂಗುರದ0ತೆ ಕಾಣುತ್ತದೆ.

ನಾಸಾದಿಂದ ಇಂಟರ್ ಆಕ್ಟಿವ್ ಮ್ಯಾಪ್ ಆರಂಭಿಸಲಾಗಿದೆ. ಇದು 2021ರ ಸೂರ್ಯ ಗ್ರಹಣವು ಭೂಮಿಯ ಮೇಲ್ಮೈಯಲ್ಲಿ ಹೇಗೆ ಸಾಗುತ್ತದೆ ಎಂಬ ಹಾದಿಯನ್ನು ತೋರುತ್ತದೆ. ಇದರಲ್ಲಿ ಇರುವಂತೆ, ಭಾರತದಲ್ಲಿ ಸೂರ್ಯ ಗ್ರಹಣ ಕಾಣಿಸಿಕೊಳ್ಳುವುದು. ಆದರೆ ಅದು ಲಡಾಕ್ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ ಗೋಚರಿಸುತ್ತದೆ. ಮಧ್ಯಾಹ್ನ 12.25ಕ್ಕೆ ಕಾಣಲು ಆರಂಭವಾಗುತ್ತದೆ. ಭಾಗಶಃ ಸೂರ್ಯಗ್ರಹಣ ಮಾತ್ರ ನೋಡಲು ಆಗುತ್ತದೆ. ಮಧ್ಯಾಹ್ನ 12.51ಕ್ಕೆ ಕೊನೆಯಾಗಲಿದೆ.

ನಾಸಾ ತಿಳಿಸಿರುವಂತೆ, ಪೂರ್ವ ಅಮೆರಿಕ, ಉತ್ತರ ಅಲಾಸ್ಕಾ, ಕೆನಡಾ ಮತ್ತು ಕೆರಬಿಯನ್‌ನ ಕೆಲ ಭಾಗ, ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಉತ್ತರ ಭಾಗದಲ್ಲಿ ಕೂಡ ಜೂನ್ 10ನೇ ತಾರೀಕಿನಂದು ಭಾಗಶಃ ಸೂರ್ಯ ಗ್ರಹಣ ಕಾಣುತ್ತದೆ. ಸೂರ್ಯ ಹುಟ್ಟುವ ಮುಂಚೆ, ಸಂದರ್ಭದಲ್ಲಿ ಹಾಗೂ ಆ ನಂತರದ ಕೆಲ ಸಮಯ ಗ್ರಹಣ ಸಂಭವಿಸುತ್ತದೆ. ಹಲವು ಪ್ರದೇಶಗಳಲ್ಲಿ ಈ ವಾರ್ಷಿಕ ಗ್ರಹಣವು ಮಧ್ಯಾಹ್ನ 1.42ಕ್ಕೆ ಆರಂಭವಾಗಿ ಸಂಜೆ 6.41ರ ತನಕ ಇರುತ್ತದೆ.

- Advertisement -
- Advertisement -

MOST POPULAR

HOT NEWS

Related news

error: Content is protected !!