Monday, May 20, 2024
spot_imgspot_img
spot_imgspot_img

ವಾಕರಿಕೆ ಸಮಸ್ಯೇಯಿದ್ದರೆ ಹೀಗೆ ಮಾಡಬಹುದು

- Advertisement -G L Acharya panikkar
- Advertisement -

ತಿಂದ ಆಹಾರದಲ್ಲಿ ವ್ಯತ್ಯಾಸವಾಗಿ, ಅಜೀರ್ಣವಾಗಿ ವಾಂತಿ ಮತ್ತು ವಾಕರಿಕೆ ಸಮಸ್ಯೆಗಳು ಬರಬಹುದು. ನಮ್ಮ ಅನಾರೋಗ್ಯಕರ ಜೀವನಶೈಲಿ ಈ ಸಮಸ್ಯೆಗೆ ಮುಖ್ಯ ಕಾರಣ. ಈ ವಾಂತಿ ಸಮಸ್ಯೆ ಇದ್ದಾಗ ತಕ್ಷಣವೇ ಡಾಕ್ಟರ್​ ಬಳಿ ಹೋಗುವ ಬದಲು ಮನೆಯಲ್ಲಿಯೇ ಕೆಲ ಮನೆಮದ್ದುಗಳನ್ನು ಟ್ರೈ ಮಾಡಬಹುದು.ಮನೆ ಮದ್ದುಗಳು ಸಂಪೂರ್ಣವಾಗಿ ನೈಸರ್ಗಿಕ ಆಹಾರ ಪದಾರ್ಥಗಳಿಂದ ಮಾಡುವುದರಿಂದ  ಇವುಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ.ಒಂದು ಕಪ್ ನೀರಿನಲ್ಲಿ 2 ಪುದೀನಾ ಎಲೆಗಳನ್ನು ಹಾಕಿ ಚನ್ನಾಗಿ ಕುದಿಸಿ, ನಂತರ ಅದಕ್ಕೆ ನಿಂಬೆ ರಸ ಮತ್ತು ಉಪ್ಪು ಹಾಕಿ ಕುಡಿದರೆ ವಾಂತಿ ನಿಲ್ಲುತ್ತದೆ. ವಾಕರಿಗೆ ಸಮಸ್ಯೆ ಕಾಡುತ್ತಿದ್ದರೆ, ಕಿತ್ತಳೆ ಹಣ್ಣು ಅಥವಾ ಅದರ ಜ್ಯೂಸ್ ಒಳ್ಳೆಯದು. ಇದು ಬೇಗ  ಸಮಸ್ಯೆಗೆ ಪರಿಹಾರ ನೀಡುತ್ತದೆ.ವಾಂತಿ ಸಮಸ್ಯೆ ಹೋಗಲಾಡಿಸಲು ಮತ್ತೊಂದು ಸುಲಭ ಮಾರ್ಗ ಎಂದರೆ ಮೊಸರು ತಿನ್ನುವುದು. ಪೊಟ್ಯಾಸಿಯಮ್ ಮತ್ತು ಮೆಗ್ನೀಷಿಯಂ ನಂತಹ ಹಲವಾರು ಅಗತ್ಯ ಪೋಷಕಾಂಶಗಳನ್ನು ಮೊಸರು ಸಮೃದ್ದವಾಗಿ ಹೊಂದಿರುತ್ತದೆ.

- Advertisement -

Related news

error: Content is protected !!