Tuesday, July 1, 2025
spot_imgspot_img
spot_imgspot_img

ಹಾಡಹಗಲೇ ರಸ್ತೆಯ ಮಧ್ಯೆ ಆನೆ ಓಡಾಟ!

- Advertisement -
- Advertisement -

ಸೋಮವಾರಪೇಟೆ: ಹಾಡಹಗಲೇ ರಸ್ತೆಯ ಮಧ್ಯೆದಲ್ಲೇ ಆನೆಯೊಂದು ಓಡಾಡುತ್ತಿದ್ದುದನ್ನು ಕಂಡು ಜನರು ಆತಂಕಗೊಂಡಿರುವ ಘಟನೆ ನಡೆದಿದೆ.

ಐಗೂರು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಡಿಕೇರಿ ಮುಖ್ಯ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆಯೇ ಆನೆ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಐಗೂರು ಸರ್ಕಾರಿ ಪ್ರೌಢಶಾಲೆ ಎದುರಿನ ಮುಖ್ಯ ರಸ್ತೆಯಲ್ಲಿ ಆನೆ ಸಂಚರಿಸಿದ್ದು, ಗ್ರಾಮದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಐಗೂರು ಪ್ರೌಢಶಾಲೆಯ ಹಿಂಭಾಗವೇ ಅರಣ್ಯ ಪ್ರದೇಶ ಇದ್ದು, ಅಲ್ಲಿಂದ ಆಹಾರ ನೀರು, ಅರಸಿ ಬಂದಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಯವರು ಇತ್ತ ಗಮನಹರಿಸಿ ಆನೆಯನ್ನು ಸೆರೆಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!