Saturday, May 15, 2021
spot_imgspot_img
spot_imgspot_img

ಪುತ್ತೂರು: ಯಮುನಾ ಬೋರ್‌ವೆಲ್ ಸಿಬ್ಬಂದಿಗಳಿಂದ ಶ್ರೀಮಹಾಲಿಂಗೇಶ್ವರ ದೇವರ ರಥಬೀದಿ ಸ್ವಚ್ಛತಾ ಕಾರ್ಯ

- Advertisement -
- Advertisement -

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಏ.17ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಏ.16ರಂದು ಪುತ್ತೂರಿನ ಪ್ರತಿಷ್ಠಿತ ಬೋರ್‌ವೆಲ್ ಸಂಸ್ಥೆಯಾದ ಯಮುನಾ ಬೋರ್‌ವೆಲ್ ಸಿಬಂದಿಗಳಿಂದ ರಥಬೀದಿ ಸ್ವಚ್ಛತಾ ಕಾರ್ಯ ನಡೆಯಿತು.

ಸಂಸ್ಥೆಯ ಮಾಲಕಿಯಾದ ದಿವ್ಯಕೃಷ್ಣ ಶೆಟ್ಟಿ ನೇತೃತ್ವ ವಹಿಸಿದ್ದರು. ಇವರ ಜೊತೆ ನ್ಯಾಯವಾದಿ ಗಿರೀಶ್ ಮಳಿ ಮತ್ತು‌ ಮನೆಯವರು ಸ್ವಚ್ಛತಾ ಕಾರ್ಯದಲ್ಲಿ ಸಾಥ್ ನೀಡಿದರು. ಯಮುನಾ ಬೋರ್‌ವೆಲ್ ನ‌ ಮಾಲಕ ದಿ.ಕೃಷ್ಣ ಶೆಟ್ಟಿಯವರು ಪ್ರತೀವರ್ಷ ರಥಬೀದಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತನ್ನ ಸಿಬ್ಬಂದಿಗಳ ಜೊತೆ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

MOST POPULAR

HOT NEWS

Related news

error: Content is protected !!