Monday, June 24, 2024
spot_imgspot_img
spot_imgspot_img

ಮಂಗಳೂರು: ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸೌಮ್ಯ ಆ‌ರ್. ಶೆಟ್ಟಿ ಆಯ್ಕೆ

- Advertisement -G L Acharya panikkar
- Advertisement -

ಮಂಗಳೂರು: ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿ ನಿನ್ನೆ ಸಂಜೆ 7.30 ಗಂಟೆಗೆ ತೊಕ್ಕೊಟ್ಟು ಅಂಬಿಕಾ ನಗರದ ಗಟ್ಟಿ ಸಮಾಜ ಭವನದಲ್ಲಿ ನಡೆದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.

ಕಾರ್ಯದರ್ಶಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕರಾದ ಅನಿತಾ ರವಿಶಂಕರ್ ರಾವ್, ಕೋಶಾಧಿಕಾರಿಯಾಗಿ ಮಾಜಿ ಸೈನಿಕರಾದ ಜೆ. ಪಿ. ರೈ ಮುನ್ನೂರು ಮತ್ತು ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಬಿ. ದೇವದಾಸ್ ರೈ, ತರ್ಜಾನಿ ಕಮ್ಯುನಿಕೇಷನ್‌ನ ಸಂಪಾದಕರಾದ ಭಾರತಿ ಶೇವೂ‌ರ್, ರೋಟರಿ ಸಹಾಯಕ ಗವರ್ನರ್ ಡಾ. ರಂಜನ್, ವಲಯ ಸೇನಾನಿ ಡಾ. ಯತೀಶ್ ಭಾಗವಹಿಸಿದರು ಎಂದು ದೇರಳಕಟ್ಟೆ ರೋಟರಿ ಕ್ಲಬ್ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!