Saturday, February 8, 2025
spot_imgspot_img
spot_imgspot_img

ಶ್ರೀರಾಮಚಂದ್ರನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿರುವುದು ಭಾರತೀಯರೆಲ್ಲರಿಗೂ ಶುಭ ಸುದ್ದಿ:- ಡಾ.ಡಿ.ವೀರೇಂದ್ರ ಹೆಗ್ಗಡೆ

- Advertisement -
- Advertisement -

ಧರ್ಮಸ್ಥಳ:-ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿರುವುದು ಭಾರತೀಯರೆಲ್ಲರಿಗೂ ಶುಭ ಸುದ್ದಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ‌ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.

ಶ್ರೀರಾಮ ಭಗವಂತನ ಅವತಾರವೆಂದು ಭಾರತೀಯರ ನಂಬಿಕೆ,ಶ್ರದ್ಧೆ.ಆತ ಭೂಮಿಯಲ್ಲಿ ಅವತರಿಸಿದ ಬಳಿಕ ತನ್ನ ಸದ್ಗುಣಗಳಿಂದ ಆದರ್ಶಮೂರ್ತಿ ಎನಿಸಿದ.ಸಹಸ್ರಾರು ವರ್ಷಗಳಿಂದ ಮರ್ಯಾದ ಪುರುಷೋತ್ತಮನೆನಿಸಿ ತನ್ನ ವ್ಯಕ್ತಿತ್ವ,ದೃಢ ನಿರ್ಧಾರಗಳಿಂದಾಗಿ ಜನಮಾನಸದಲ್ಲಿ ನೆಲೆಯಾದ.ತನ್ನ ಆದರ್ಶಗಳಿಂದ ವಿಶ್ವವ್ಯಾಪಿಯಾದ. ಶ್ರೀರಾಮ ಸ್ಮರಣೆ ಇನ್ನೂ ಸಹಸ್ರ ವರ್ಷಗಳವರೆಗೆ ಈ ನೆಲದಲ್ಲಿ ಉಳಿಯಲಿ ಮತ್ತು ಬೆಳೆಯಲಿ ಎಂದು ಹಾರೈಸಿದರು.

- Advertisement -

Related news

error: Content is protected !!