Friday, April 26, 2024
spot_imgspot_img
spot_imgspot_img

ಧ್ವನಿ ವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ:

- Advertisement -G L Acharya panikkar
- Advertisement -

ಬಂಟ್ವಾಳ: ಧ್ವನಿ ವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ವತಿಯಿಂದ ಕೋವಿಡ್-19 ಮಹಾಮಾರಿಯಿಂದಾಗಿ ಸಂಘದ ಸದಸ್ಯರ ಹಾಗೂ  ಸದಸ್ಯ ಸಂಸ್ಥೆಗಳ ನೌಕರರಿಗೆ ಆದಾಯ ಇಲ್ಲದಂತಾಗಿದೆ.  ಅ.4ರ  ಶುಕ್ರವಾರ ಬೆಳಿಗ್ಗೆ 10 ಘಂಟೆಗೆ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ.‌

ಈ ಬಗ್ಗೆ ಸರಕಾರಕ್ಕೆ  ಸಮಸ್ಯೆಯ ತೀವ್ರತೆ ತಿಳಿಸಲು  ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ನಿರ್ಧರಿಸಲಾಗಿದೆ. 

ಬೇಡಿಕೆಗಳು :
1)ಸಾರ್ವಜನಿಕ* ಕಾರ್ಯಕ್ರಮಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸರ್ಕಾರವು  ನಿರ್ಧರಿಸಿದಂತೆ,100 ಮಂದಿಯು ಭಾಗವಹಿಸುವ  ಬದಲಿಗೆ 250 ಮಂದಿಗೆ  ಭಾಗವಹಿಸಲು ಅನುಮತಿ ನೀಡಬೇಕು.     

2 ).ರಾಜ್ಯ ಸರಕಾರವು ನಮ್ಮ ವ್ಯವಹಾರವನ್ನು ಸಣ್ಣ ಕೈಗಾರಿಕೆ ಎಂದು ಪರಿಗಣಿಸಬೇಕು ಹಾಗೂ ನಮಗೆ ಸಿಗುವ ಸರಕಾರದ ಸೌಲಭ್ಯಗಳನ್ನು ನೀಡಬೇಕು. 

3).ಸರಕಾರವು ನಮ್ಮ ವ್ಯವಹಾರದ ಪರಿಸ್ಥಿತಿಯನ್ನು ಅವಲೋಕಿಸಿ ನಮ್ಮ ಸಂಘದ ಸದಸ್ಯರಿಗೆ ಸಬ್ಸಿಡಿ ಹೊಂದಿರುವ ಸಾಲ ಸೌಲಭ್ಯ ವ್ಯವಸ್ಥೆ ಮಾಡಬೇಕು.   


ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ  ಶಿವಕುಮಾರ್ ಹಿರೇಮಠ್ ರವರು ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ  ಜಿಲ್ಲೆಯ ಎಲ್ಲಾ ತಾಲ್ಲೂಕಿನ ಎಲ್ಲಾ ಸದಸ್ಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಬೇಕೆಂದು ಸಂಘದ ಜಿಲ್ಲಾಧ್ಯಕ್ಷ  ರಾಜಶೇಖರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!