Tuesday, July 21, 2026
spot_imgspot_img
spot_imgspot_img

*ಸರ್ಕಾರ ಅನುಮತಿ ನೀಡಿದರೆ ಎಸ್.ಪಿ.ಬಿ. ಅಭಿಮಾನಿಗಳಿಗೆ ಪಾರ್ಥಿವ ಶರೀರದ ಅಂತಿಮ ದರ್ಶನ*

- Advertisement -
- Advertisement -

ಚೆನ್ನೈ ತೀವ್ರ ಅನಾರೋಗ್ಯದಿಂದ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಕೋಡಂಬಾಕಂನಲ್ಲಿರುವ ಎಸ್.ಪಿ.ಬಿ. ಮನೆಗೆ ಸ್ಥಳಾಂತರಿಸಲಾಗಿದ್ದು, (ಸೆ.26) ಬೆಳಗ್ಗೆ ಎಸ್ಪಿಬಿಯವರ ಅಂತ್ಯಕ್ರಿಯೆ ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್’ನಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಅನುಮತಿ ನೀಡಿದರೆ ಎಸ್.ಪಿ.ಬಿ. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ಇಂದು ರಾತ್ರಿಯಿಡಿ ತಮಿಳುನಾಡಿನ ಕೋಡಂಬಾಕಂನಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.

ಆ.5ರಂದು ಕೊರೊನಾ ಸೋಂಕಿನಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ನಿಧನರಾಗಿದ್ದರು.

- Advertisement -

Related news

error: Content is protected !!