Wednesday, July 2, 2025
spot_imgspot_img
spot_imgspot_img

ಎಸ್ಸೆಸ್ಸೆಫ್ ಸೂರಿಕುಮೇರು ಶಾಖೆಗೆ ನವ ಸಾರಥ್ಯ

- Advertisement -
- Advertisement -

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಇದರ ಸೂರಿಕುಮೇರು ಶಾಖೆಯ ವಾರ್ಷಿಕ ಮಹಾಸಭೆ ಸೋಮವಾರ ಸೂರಿಕುಮೇರಿನ ಸಂಜರಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಹಳೆಯ ಕಮಿಟಿಯನ್ನು ಬರ್ಖಾಸ್ತು ಮಾಡಿ ಹೊಸ ಕಮಿಟಿಯನ್ನು ರಚಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಸೂರಿಕುಮೇರು ಶಾಖೆಯ ಅಧ್ಯಕ್ಷರಾದ ಮುಬಶ್ಶಿರ್ ಮುಸ್ಲಿಯಾರ್ ವಹಿಸಿದರು, ಮುಈನುದ್ದೀನ್ ಮಾಣಿ ಕಾರ್ಯಕ್ರಮಕ್ಕೆ ಬಂದವರನ್ನು ಸ್ವಾಗತಿಸಿದರು,ಇಸಾಕ್ ಮಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ದುಆ ಮಾಡಿದರು,ಪ್ರಧಾನ ಕಾರ್ಯದರ್ಶಿ ನೌಶಾದ್ ಉಮ್ಮರ್ ಅನುಪಸ್ಥಿತಿಯಲ್ಲಿ ಇಮ್ರಾನ್ ಸೂರಿಕುಮೇರು ವಾರ್ಷಿಕ ವರದಿಯನ್ನು ಮಂಡಿಸಿದರು.

ಮುಬಶ್ಶಿರ್ ಮುಸ್ಲಿಯಾರ್ ರವರ ಅಧ್ಯಕ್ಷ ಭಾಷಣ ನಂತರ ಕಾರ್ಯಕ್ರಮಕ್ಕೆ ಚುನಾವಣಾ ವೀಕ್ಷಕರಾಗಿ ಬಂದಂತಹ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಖಲಂದರ್ ಪಾಟ್ರಕೋಡಿಯವರ‌ ನೇತೃತ್ವದಲ್ಲಿ ಹೊಸ ಕಮಿಟಿಯನ್ನು ಆರಿಸಲಾಯಿತು. ಆಯ್ಕೆಯಾದ ಪದಾಧಿಕಾರಿಗಳಿಗೆ ಖಲಂದರ್ ಪಾಟ್ರಕೋಡಿಯವರು ಜವಾಬ್ದಾರಿಗಳ ಕುರಿತು ತರಗತಿ ನೀಡಿದರು.


ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ಮುಬಶ್ಶಿರ್ ಮುಸ್ಲಿಯಾರ್ ಸೂರಿಕುಮೇರು, ಉಪಾಧ್ಯಕ್ಷರುಗಳಾಗಿ ಇಸಾಕ್ ಮಾಣಿ,ಸವಾದ್ ಮಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಇಮ್ರಾನ್ ಸೂರಿಕುಮೇರು, ಜೊತೆ ಕಾರ್ಯದರ್ಶಿಗಳಾಗಿ ಮುಈನುದ್ದೀನ್ ಮಾಣಿ, ನೌಶಾದ್ ಉಮ್ಮರ್ ಸೂರಿಕುಮೇರು, ಕೋಶಾಧಿಕಾರಿಯಾಗಿ ಜಾಬಿರ್ ಸೂರಿಕುಮೇರು
ಕ್ಯಾಂಪಸ್ ಕಾರ್ಯದರ್ಶಿಯಾಗಿ ಸೈಫುಲ್ಲಾ ಖಾನ್ ಮಾಣಿ.

ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ರಬೀಅ್ ಮಾಣಿ, ಜಮಾಲುದ್ದೀನ್ ಮಾಣಿ, ಝೈನುದ್ದೀನ್ ಸೂರಿಕುಮೇರು, ಆಶಿಕ್ ಸೂರಿಕುಮೇರು, ಮುನೀರ್ ಮಾಣಿ,ಫಾರೂಕ್ ಸೂರಿಕುಮೇರು,ಮುಹೈಮಿನ್ ಸೂರಿಕುಮೇರು,ತಾಜುದ್ದೀನ್ ಸೂರಿಕುಮೇರು,ಮುರ್ಷಿದ್ ಸೂರಿಕುಮೇರುರನ್ನು ಆಯ್ಕೆ ಮಾಡಲಾಯಿತು. ಮುಬಶ್ಶಿರ್ ಸೂರಿಕುಮೇರು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

- Advertisement -

Related news

error: Content is protected !!