Wednesday, July 22, 2026
spot_imgspot_img
spot_imgspot_img

SSLC ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಿಬರಿಕಲ್ಲು ಮಾಡ ಶ್ರೀ ಮಲರಾಯ ಮೂವರ್ ದೈವಂಗಳ ಸೇವಾ ಮಂಡಲಿ ವತಿಯಿಂದ ಸನ್ಮಾನ

- Advertisement -
- Advertisement -

ಶಿಬರಿಕಲ್ಲು ಮಾಡ ಶ್ರೀ ಮಲರಾಯ ಮೂವರ್ ದೈವಂಗಳ ಸೇವಾ ಮಂಡಲಿ ವತಿಯಿಂದ SSLCಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಸೈಂಟ್ ರೀಟಾ ಪ್ರೌಡ ಶಾಲೆ ವಿಟ್ಲದಲ್ಲಿ ಕಲಿತ ಅಣ್ಣು ಪೂಜಾರಿ ಜೋಗಿಬೆಟ್ಟು ಹಾಗೂ ಜಯಂತಿ ಅವರ ಪುತ್ರಿ ಕುಮಾರಿ ಭ್ರಾಮರಿ 617 ಅಂಕಗಳನ್ನು ಪಡೆದು ಶಾಲೆಯಲ್ಲಿ ದ್ವಿತೀಯ ಹಾಗೂ ವಿಟ್ಲ ಪದವಿ ಪೂರ್ವ ಕಾಲೇಜು ಪ್ರೌಡಶಾಲಾ ವಿಭಾಗದಲ್ಲಿ ಕೃಷ್ಣಯ್ಯ ಆಚಾರ್ಯ ಹಾಗೂ ಕಮಲ ಅವರ ಪುತ್ರಿ ಕುಮಾರಿ ಶ್ರುತಿ 604 ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನಗಳನ್ನು ಪಡೆದು ಊರಿಗೆ ಕೀರ್ತಿಯನ್ನು ತಂದು ಕೊಟ್ಟ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸೇವಾ ಮಂಡಲಿಯ ಸದಸ್ಯರುಗಳಾದ ಪುನೀತ್ ಮಾಡತ್ತಾರ್ , ಯಶೋಧರ ಪಟ್ಲ , ಶಿವಪ್ರಸಾದ್ ಮಾಡತ್ತಾರ್ , ತುವಿನ್ ಮಾಡತ್ತಾರ್ , ಯೋಗೀಶ್ ಪೂಜಾರಿ , ಅಣ್ಣು ಪೂಜಾರಿ , ಅಶೋಕ್ ಮಾಡತ್ತಾರ್ , ಜೀತು ಮಾಡತ್ತಾರ್ , ನಾಗೇಶ್ ಆಚಾರ್ಯ , ಶ್ರೀಮತಿ ಸೀತಾ , ಶ್ರೀಮತಿ ಪ್ರೇಮಾ, ಶ್ರೀಮತಿ ಗಂಗಾ , ಶ್ರೀಮತಿ ಅಕ್ಷತಾ , ಶ್ರೀಮತಿ ಉಷಾ, ಶ್ರೀಮತಿ ವನೀತ , ಶ್ರೀಮತಿ ನಿಮಿತಾ , ಬ್ರಿಜೇಶ್ ಮಾಡತ್ತಾರ್ , ಶ್ರೀಮತಿ ಹೇಮಾ ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು

- Advertisement -

Related news

error: Content is protected !!