Friday, March 29, 2024
spot_imgspot_img
spot_imgspot_img

2022-23ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟ; ಶೇ.83.89ರಷ್ಟು ಫಲಿತಾಂಶ ದಾಖಲು

- Advertisement -G L Acharya panikkar
- Advertisement -

ಈ ಬಾರಿ ಚಿತ್ರದುರ್ಗ ಫಸ್ಟ್‌, ಮಂಡ್ಯ ಸೆಕೆಂಡ್‌- ಬಾಲಕಿಯರೇ ಮೇಲುಗೈ

vtv vitla

ಬೆಂಗಳೂರು: 2022-23ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿದೆ, ಈ ಬಾರಿ ಶೇ.83.89ರಷ್ಟು ಫಲಿತಾಂಶ ದಾಖಲಾಗಿದೆ.

ಚಿತ್ರದುರ್ಗ ಜಿಲ್ಲೆ ಈ ಬಾರಿ ಎಸ್‌ ಎಸ್‌ ಎಲ್‌ ಫಲಿತಾಂಶದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಮಂಡ್ಯ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಹಾಸನ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ನಾಲ್ವರು ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.  20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆಎಸ್ ಇಎಬಿ ) ಪತ್ರಿಕಾಗೋಷ್ಠಿ ಫಲಿತಾಂಶ ಪ್ರಕಟಿಸಿದೆ.

ಎಸೆಸೆಲ್ಸಿ ಪರೀಕ್ಷೆ 2023 ಮಾರ್ಚ್ 31 ರಂದು ಪ್ರಾರಂಭವಾಗಿದ್ದು, ಏಪ್ರಿಲ್ 15, 2023 ರಂದು ಕೊನೆಗೊಂಡಿತ್ತು.ಈ ಪರೀಕ್ಷೆಗೆ ರಾಜ್ಯದ್ಯಾಂತ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. 15,498 ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ರಾಜ್ಯಾದ್ಯಂತ ಒಟ್ಟು 3,305 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಬಂದ ಉತ್ತರ ಪತ್ರಿಕೆಗಳನ್ನು ತಿದ್ದಲು 63 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು

ಕಳೆದ ಬಾರಿ ಅಂದರೆ 2022 ರಲ್ಲಿ, ಒಟ್ಟಾರೆ ಉತ್ತೀರ್ಣ ಶೇಕಡಾ 85.63 ರಷ್ಟು ದಾಖಲಾಗಿತ್ತು.

http://karresults.nic.in/

ಅಧಿಕೃತ ವೆಬ್‌ಸೈಟ್‌ನ ವಿವರ ಇಲ್ಲಿದೆ ವೆಬ್‌ಸೈಟ್‌ನಲ್ಲಿ SSLC ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪಡೆಯಬಹುದಾಗಿದೆ

- Advertisement -

Related news

error: Content is protected !!