Sunday, April 28, 2024
spot_imgspot_img
spot_imgspot_img

ಮಾಣಿ : ಎಸ್ಸೆಸ್ಸೆಫ್ ಪೇರಮೊಗರು ಸೆಕ್ಟರ್ ಸಾಹಿತ್ಯೋತ್ಸವ; ಪೇರಮೊಗರು ಯುನಿಟ್ ಚಾಂಪಿಯನ್, ಕೆಮ್ಮಾನ್ ಯುನಿಟ್ ರನ್ನರ್ಸ್

- Advertisement -G L Acharya panikkar
- Advertisement -

ಮಾಣಿ : ಎಸ್ಸೆಸ್ಸೆಫ್ ಪೇರಮೊಗರು ಸೆಕ್ಟರ್ ವತಿಯಿಂದ ಆಯೋಜಿಸಿದ್ದ ಸಾಹಿತ್ಯೋತ್ಸವವು ಡಿಸೆಂಬರ್ 17 ಆದಿತ್ಯವಾರ ಸತ್ತಿಕಲ್ ತಾಜುಲ್ ಉಲಮಾ ಮದ್ರಸಾದಲ್ಲಿ ನಡೆಯಿತು.

ಪೇರಮೊಗರು ದರ್ಗಾ ಝಿಯಾರತಿನೊಂದಿಗೆ ಚಾಲನೆಗೊಂಡ ಸಾಹಿತ್ಯೋತ್ಸವದಲ್ಲಿ ಇಸ್ಮಾಯಿಲ್ ಹಾಜಿ ಕಲ್ಲಾಜೆ ಧ್ವಜಾರೋಹಣಗೈದರು. ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್ ದುಆ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಇಸ್ಮಾಯಿಲ್ ಹನೀಫಿ ನಚ್ಚಬೆಟ್ಟು ವಹಿಸಿದರು. ಅಶ್ರಫ್ ಸಖಾಫಿ ಸತ್ತಿಕಲ್ಲು ಕಾರ್ಯಕ್ರಮ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ರಾಜ್ಯ ನಾಯಕರಾದ ಹಾಫಿಳ್ ತೌಸೀಫ್ ಅಸ್‌ಅದಿ ಕೆಮ್ಮಾನ್, ಡಿವಿಶನ್ ನಾಯಕರಾದ ಉಬೈದುಲ್ಲಾಹ್ ಬೋವು, ನಾಸಿರ್ ಆಳಕೆ, ರಮೀಝ್ ಹಾಶಿಮಿ ಕಲ್ಲೇರಿ, ಶಾಹುಲ್ ಹಮೀದ್ ಅಳಕೆ ಹಾಗೂ ಸೆಕ್ಟರ್, ಯೂನಿಟ್ KMJ,SYS,SSF ನಾಯಕರು ಕಾರ್ಯಕರ್ತರು ಭಾಗವಹಿಸಿದರು.

ಸಮಾರೋಪ ಸಮಾರಂಭದಲ್ಲಿ SSF ಉಪ್ಪಿನಂಗಡಿ ಡಿವಿಶನ್ ಕೋಶಾಧಿಕಾರಿ ಅತಾವುಲ್ಲಾ ಹಿಮಮಿ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು. ಮೂರು ವೇದಿಕೆಗಳಲ್ಲಿ ವಿವಿಧ ವಿಭಾಗಗಳಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಪೇರಮೊಗರು ಶಾಖೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಕೆಮ್ಮಾನ್ ನಚ್ಚಬೆಟ್ಟು ಶಾಖೆ ರನ್ನರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಅನ್ಸಾರ್ ಸತ್ತಿಕಲ್ಲು ಸ್ವಾಗತಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನುಮಾನ್ ಸತ್ತಿಕಲ್ಲು ಧನ್ಯವಾದಗೈದರು. ಮುಹಮ್ಮದ್ ಅಲೀ ಮುಸ್ಲಿಯಾರ್ ಶೇರಾ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!