Friday, March 29, 2024
spot_imgspot_img
spot_imgspot_img

ರಾಜ್ಯದಲ್ಲಿ ಇಂದು 8856 ಮಂದಿಗೆ ಕೊರೊನಾ ಸೋಂಕು..! ದಕ್ಷಿಣ ಕನ್ನಡದಲ್ಲಿ 240, ಉಡುಪಿ 139 ಮಂದಿಗೆ ಕೊರೊನಾ ಸೋಂಕು : ರಾಜ್ಯದಲ್ಲಿ ಇಂದು  ಸೋಂಕಿತರ 87 ಸಾವು.

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿಸಿದೆ. ಇಂದು ಒಂದೇ ದಿನ 8856 ಮಂದಿ ಮೇಲೆ ಅಟ್ಯಾಕ್ ಮಾಡಿದೆ. ಅಲ್ಲದೇ,87 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಹೀಗಾಗಿ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 601767 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ 485268 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ವೈರಸ್ 4226 ಮಂದಿಗೆ ವಕ್ಕರಿಸಿದೆ. ಬೆಂಗಳೂರು ಒಂದರಲ್ಲೇ 24 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದೆ .ಸಂಖ್ಯೆ ನಗರದಲ್ಲಿ ಇಂದು 3667 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ನಗರದಲ್ಲಿ ಸಕ್ರಿಯ ಪ್ರಕರಣದ 47145 ಮಂದಿಯಲ್ಲಿ  ಪತ್ತೆಯಾಗಿದೆ.

ಮಂಗಳೂರು:- ದ.ಕ ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ರಣಕೇಕೆ ಹಾಕಿದೆ. ಇಂದು ಕೂಡ 240 ಮಂದಿಗೆ ಸೋಂಕು ತಗುಲಿದೆ.299 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 22946 ಆಗಿದ್ದು, ಇಲ್ಲಿಯವರೆಗೆ 16801 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.5609 ಮಂದಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಒಟ್ಟು ಜಿಲ್ಲೆಯಲ್ಲಿ 534 ಮಂದಿ ಸೊಂಕಿಗೆ ಬಲಿಯಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 139 ಮಂದಿಗೆ ಪತ್ತೆಯಾಗಿದೆ. ಒಟ್ಟು ಸೊಂಕಿತರ ಸಂಖ್ಯೆ 17144 ಆಗಿದ್ದು ,ಇಲ್ಲಿಯವರೆಗೆ 14968 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.2029 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!