ರಾಜಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕೆ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ.

ರಾಜ್ಯಾದ್ಯಂತ 772 ಕೇಂದ್ರಗಳಲ್ಲಿ ಬೆಳಗ್ಗೆ 10.15 ರಿಂದ 1.15ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. 2.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ. ಮುಖ್ಯ ಪರೀಕ್ಷೆಯಲ್ಲಿ ಕೊರೊನಾ ಸೇರಿ ಇನ್ನಿತರ ಅನಾರೋಗ್ಯ ಕಾರಣಗಳಿಂದಾಗಿ ಪರೀಕ್ಷೆಗೆ ಗೈರು ಹಾಜರಾಗಿದ್ದ 18,075 ವಿದ್ಯಾರ್ಥಿಗಳಿಗೆ ಇದು ಪ್ರಥಮ ಅವಕಾಶವೆಂದು ಪರಿಗಣನೆ ಮಾಡಲಾಗಿದೆ.

ಪರೀಕ್ಷೆಯ ವೇಳಾಪಟ್ಟಿ
ಸಪ್ಟೆಂಬರ್ 21- ಗಣಿತ, ಸಮಾಜಶಾಸ್ತ್ರ
ಸಪ್ಟೆಂಬರ್ 22- ಪ್ರಥಮ ಭಾಷೆ
ಸಪ್ಟೆಂಬರ್ 23- ಸಮಾಜಶಾಸ್ತ್ರ
ಸಪ್ಟೆಂಬರ್ 24- ದ್ವಿತೀಯ ಭಾಷೆ
ಸಪ್ಟೆಂಬರ್ 25- ತೃತೀಯ ಭಾಷೆ
ಸಪ್ಟೆಂಬರ್ 26- ಎಲಿಮೆಂಟ್ಸ್ ಆಫ್ ಮೆಕಾನಿಕಲ್, ಎಲಿಮೆಂಟ್ಸ್ ಆಫ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಗ್ರಾಫಿಕ್ಸ್, ಅರ್ಥಶಾಸ್ತ್ರ
ಸಪ್ಟೆಂಬರ್ 28- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಸಪ್ಟೆಂಬರ್ 29- ಜಿಟಿಎಸ್ ಪ್ರಾಯೋಗಿಕ ಪರೀಕ್ಷೆ

