Thursday, March 28, 2024
spot_imgspot_img
spot_imgspot_img

ಕೈ ಮುರಿದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ಯುವಕನನ್ನು ಆಸ್ಪತ್ರೆ ಸೇರಿಸಿ ಆತನ ಪೋಷಕರಿಗೆ ಒಪ್ಪಿಸುವಲ್ಲಿ ಸಫಲರಾದ ಎಂ‌.ಎನ್‌‌.ಜಿ ಫೌಂಡೇಶನ್

- Advertisement -G L Acharya panikkar
- Advertisement -

ಮಂಗಳೂರು(ನ.7): ಕಳೆದ ತಿಂಗಳ ದಿನಾಂಕ 26-10-2020 ಸೋಮವಾರದಂದು ರಾತ್ರಿ ಮೋಂಟುಗೋಳಿ ಎಂಬಲ್ಲಿನ ಬಸ್ಸು ತಂಗುದಾಣ ಒಂದರಲ್ಲಿ ಯುವಕನೊಬ್ಬನು ತನ್ನ ಕೈ ಮುರಿದುಕೊಂಡು ತೀವ್ರ ಗಾಯಗೊಂಡು ಆ ಗಾಯವು ಕೊಳೆತು ಶೋಚನೀಯ ಸ್ಥಿತಿಯಲ್ಲಿದ್ದು. ಇತರರ‌ ಸಹಾಯಕ್ಕಾಗಿ ಗೋಳಾಡುತ್ತಿದ್ದನು.
ಇದನ್ನು ಕಂಡ ಸ್ಥಳೀಯರು ಸಮಾಜ ಸೇವಾ ರಂಗದಲ್ಲಿ ಮಂಗಳೂರಿನಾದ್ಯಂತ ಮಂಚೂಣಿಯಲ್ಲಿರುವ ಎಂ‌.ಎನ್.ಜಿ. ಫೌಂಡೇಶನ್ ಸಂಸ್ಥೆಯ ಪದಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು.

ಆ ಕೂಡಲೇ ಕಾರ್ಯಪ್ರವೃತ್ತರಾದ ಸಂಸ್ಥೆಯ ಪಾದಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.ಹಾಗೂ ಆ ಸಂಧರ್ಭದಲ್ಲಿ ಯುವಕನ ಕೈಯ್ಯಲ್ಲಿ ಆಧಾರ್ ಕಾರ್ಡ್ ಹಾಗೂ ಇನ್ನಿತರ ಯಾವುದೇ ವಿಳಾಸ ಕುರುಹುಗಳು ಕೂಡ ಇರುವುದಿಲ್ಲ. ನಂತರದಲ್ಲಿ ಆ ಯುವಕನು ನೀಡಿದ ಮಾಹಿತಿ ಆಧಾರದಲ್ಲಿ ಯುವಕನು ಮೂಲತಃ ಪಂಜಾಬ್ ಅಮೃತಸರದವನು ಎಂದು ತಿಳಿದುಬಂದಿತ್ತು.

ಸಂಸ್ಥೆಯು ಸ್ಥಳಿಯ ಪೋಲೀಸ್ ಠಾಣೆಗೆ ಮಾಹಿತಿ ನೀಡಿ ಆ ಯುವಕನ ವೀಡಿಯೋ ಹಾಗೂ ಭಾವಚಿತ್ರದೊಂದಿಗೆ ಬರಹವೊಂದನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಟ್ಟಿದ್ದರು.ಇದೀಗ ಯುವಕನ ಕುಟುಂಬವನ್ನು ತಲುಪಲು ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆ ನಡೆಸಿದ ಸತತ ಪ್ರಯತ್ನಗಳು ಸಫಲವಾಗಿ ಆತನ ಪೋಷಕರು ಮಂಗಳೂರು ತಲುಪಿರುತ್ತಾರೆ.ಎಮ್ ಎನ್ ಜಿ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮೊಹಮ್ಮದ್ ಮೋನು ಅವರ ಸಮ್ಮುಖದಲ್ಲಿ ಆ ಯುವಕನ ತಂದೆಗೆ ಯುವಕನನ್ನು ಹಸ್ತಾಂತರಿಸಲಾಯಿತು.ಈ ಸಂಧರ್ಭದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಣೆಯಾಗಿದ್ದ ಮಗನನ್ನು ವಾಪಸ್ಸು ಪಡೆದ ತಂದೆಯ ಮುಖದಲ್ಲಿ ಮೂಡಿದ ಕಣ್ಣೀರಿನ ಆ ಆನಂದಭಾಷ್ಪಕ್ಕೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ವಠಾರವು ಸಾಕ್ಷಿಯಾಗಿದೆ.

ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆ ಪದಾಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಸ್ಥಳೀಯವಾಗಿ ಮತ್ತು ಸಾಮಾಜಿಕ ‌ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ಹಾಗೂ ಈ ಮಹತ್ವಾಕಾರ್ಯದಲ್ಲಿ ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯ ಜೊತೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಸದಸ್ಯರು ಕೂಡ ಕೈ ಜೋಡಿಸಿದ್ದರು.

- Advertisement -

Related news

error: Content is protected !!