




ಬಂಟ್ವಾಳ : ಸುಮಾರು ಎಂಟು ದಿನಗಳ ಹಿಂದೆ ಕಳವಾಗಿದ್ದ ದ್ವಿಚಕ್ರ ವಾಹನ ಸಹಿತ ಆರೋಪಿಯನ್ನು ಬಿ.ಸಿ ರೋಡಿನಲ್ಲಿ ಬಂಟ್ವಾಳ ನಗರ ಠಾಣೆಯ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ದಿನಾಂಕ 25.09.2024 ರಂದು KA 19EG 6374 ನೇ ಹೋಂಡಾ ಆಕ್ಟಿವಾ ದ್ವಿಚಕ್ರವಾಹನವು ಕಳವಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆ.ಕ್ರ 162/2024 ಕಲಂ 303(2) BNS ಪ್ರಕರಣದಲ್ಲಿ ದಾಖಲಾಗಿತ್ತು.
ದಿನಾಂಕ 02.10.2024 ರಂದು ಬಂಟ್ವಾಳ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ದುರ್ಗಪ್ಪರವರು ಸಿಬ್ಬಂದಿಗಳೊಂದಿಗೆ ಬಿ.ಸಿ ರೋಡಿನ ಫ್ಲೈ ಓವರ್ ಕೆಳಗೆ ವಾಹನಗಳನ್ನು ತಪಾಸಣೆ ನಡೆಸುತ್ತಿರುವ ವೇಳೆ, ಏನ್. ಜಿ ಸರ್ಕಲ್ ಕಡೆಯಿಂದ ಬಂದ ಸದ್ರಿ ವಾಹನವನ್ನು ನಿಲ್ಲಿಸಿ ವಿಚಾರಿಸಿದಾಗ ಅದರ ಚಾಲಕ ಅಬುಬಕ್ಕರ್ ಸಿದ್ದಿಕ್ (40), ನಾವೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರು ಸಮರ್ಪಕ ಉತ್ತರ ನೀಡದೇ ಇದ್ದುದರಿಂದ, ಆತನನ್ನು ಮಾನ್ಯ ಡಿ ವೈ ಎಸ್ ಪಿ ಬಂಟ್ವಾಳ ರವರು ಸ್ವತ್ತು ಕಳವು ಪ್ರಕರಣಗಳ ಪತ್ತೆ ಬಗ್ಗೆ ರಚಿಸಿದ್ದ ತಂಡದ ಸಹಾಯದೊಂದಿಗೆ ಕೂಲಂಕುಶವಾಗಿ ವಿಚಾರಿಸಿ, ಆರೋಪಿತನು ಸದ್ರಿ ದ್ವಿಚಕ್ರ ವಾಹನವನ್ನು ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಗ್ರಾಮದ ಮೇಲ್ಕರ್ ಫ್ಲೈಓವರ್ ಕೆಳಗಡೆಯಿಂದ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಯನ್ನು ದಸ್ತಗಿರಿ ಮಾಡಿ ಕಳವು ಮಾಡಿದ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ.