Thursday, August 6, 2026
spot_imgspot_img
spot_imgspot_img

ಕಲ್ಲು ಬಂಡೆ ಅಡಿಗೆ ಸಿಲುಕಿ ಮೂವರು ಮಕ್ಕಳು ಸಾವು

- Advertisement -
- Advertisement -

ಜಮೀನಿನಲ್ಲಿ ಆಟವಾಡುತ್ತಿರುವ ವೇಳೆ ಬೃಹತ್ ಕಲ್ಲು ಬಂಡೆ ಉರುಳಿ ಬಂಡೆ ಅಡಿ ಸಿಲುಕಿ ಮೂವರು ಮಕ್ಕಳು ಸಾವನಪ್ಪಿರುವ ಘಟನೆ ರಾಯಚೂರು ಲಿಂಗಸೂಗುರು ತಾಲೂಕಿನ ಗೌಡೂರು ತಾಂಡದಲ್ಲಿ ನಡೆದಿದೆ.

ಮೃತ ಮಕ್ಕಳನ್ನು ಮಂಜುನಾಥ್ (9), ವೈಶಾಲಿ (6) ರಘು‌ (8) ಎಂದು ಗುರುತಿಸಲಾಗಿದೆ.

ಮೂವರು ಮಕ್ಕಳು ಶಾಲೆಗೆ ರಜೆ ಇದೆ ಎಂದು ಪೋಷಕರ ಜೊತೆ ಜಮೀನಿಗೆ ತೆರಳಿದ್ದಾರೆ. ಈ ವೇಳೆ ಜಮೀನಿನ ಸಮೀಪದಲ್ಲಿದ್ದ ಬೃಹತ್ ಬಂಡೆಯ ಕೆಳಗೆ ಆಡವಾಡುತ್ತಿದ್ದರು. ಈ ವೇಳೆ ಬಂಡೆ ಜಾರಿ ಮಕ್ಕಳ ಮೇಲೆ ಬಿದ್ದಿದೆ. ತಕ್ಷಣ ಪೋಷಕರು ಮಕ್ಕಳನ್ನು ರಕ್ಷಿಸಲು ಧಾವಿಸಿದರೂ ಕೂಡ ಬೃಹತ್ ಬಂಡೆ ಜಾರಿಸಲು ಆಗದೆ. ಅವರ ಎದುರೇ ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!