Thursday, May 16, 2024
spot_imgspot_img
spot_imgspot_img

ಅಬ್ಬರಿಸಿದ ಮೋಚಾ ಚಂಡಮಾರುತ: ಬಲಿಯಾದವರ ಸಂಖ್ಯೆ 81ಕ್ಕೆ ಏರಿಕೆ! – ಹನ್ನೊಂದು ಸಾವಿರಕ್ಕೂ ಅಧಿಕ ಮನೆಗಳು ಹಾನಿ

- Advertisement -G L Acharya panikkar
- Advertisement -

ಮೋಚಾ ಚಂಡಮಾರುತ ಅಬ್ಬರಿಸುತ್ತಿದೆ. ಮೋಚಾ ಚಂಡಮಾರುತದಿಂದಾಗಿ ಮ್ಯಾನ್ಮಾರ್‌ ಜನ ತತ್ತರಿಸಿ ಹೋಗಿದ್ದಾರೆ. ವೇಗವಾಗಿ ಬೀಸುತ್ತಿರುವ ಗಾಳಿ ಹಾಗೂ ಮಳೆಗೆ ಜನಜೀವನವೇ ಅಸ್ತವ್ಯಸ್ಥವಾಗಿದೆ. ಮೋಚಾ ಅಟ್ಟಹಾಸಕ್ಕೆ ಅಪಾರ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ. ಸ್ಥಳೀಯ ನಾಯಕರು, ಅಧಿಕಾರಿಗಳು ಮತ್ತು ರಾಜ್ಯ ಮಾಧ್ಯಮಗಳು ಮಾಡಿದ ವರದಿ ಪ್ರಕಾರ ಮ್ಯಾನ್ಮಾರ್‌ನಲ್ಲಿ ಮೋಚಾ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ನೂರಾರು ಜನ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಸಂಪರ್ಕ ವ್ಯವಸ್ಥೆ ಹದಗೆಟ್ಟಿದೆ.

ಭಾನುವಾರ ಮಧ್ಯಾಹ್ನದ ನಂತರ 209 ಕಿಲೋಮೀಟರ್ (130 ಮೈಲುಗಳು) ವೇಗದ ಗಾಳಿಯೊಂದಿಗೆ ರಾಖೈನ್ ರಾಜ್ಯದ ಸಿಟ್ವೆ ಟೌನ್‌ಶಿಪ್ ಬಳಿ ಮೋಚಾ ಚಂಡಮಾರುತ ಬಂದು ಅಪ್ಪಳಿಸಿದ್ದು, ಭೂಕುಸಿತ ಉಂಟು ಮಾಡಿತ್ತು. ಸೋಮವಾರ ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ದುರ್ಬಲಗೊಂಡಿದ್ದು, ವ್ಯಾಪಕ ಪ್ರವಾಹವುಂಟು ಮಾಡಿತ್ತು. ಭಾರಿ ಗಾಳಿಯ ರಭಸಕ್ಕೆ ಕಟ್ಟಡಗಳ ಮೇಲ್ಛಾವಣಿಗಳು ಕಿತ್ತುಹೋಗಿದ್ದು, ಫೋನ್ ಟವರ್​ಗಳು ನೆಲಕ್ಕುರುಳಿವೆ.

ಬಗಾನ್‌ನ ಕೇಂದ್ರ ನಗರ ಸೇರಿದಂತೆ ಮತ್ತಷ್ಟು ಒಳನಾಡಿನ ಪ್ರದೇಶಗಳು ಹಾನಿಗೊಳಗಾಗಿವೆ. ಭೀಕರ ಚಂಡಮಾರುತಕ್ಕೆ 11,532 ಮನೆಗಳು, 73 ಧಾರ್ಮಿಕ ಕಟ್ಟಡಗಳು, 47 ಮಠಗಳು, 163 ಶಾಲೆಗಳು, 29 ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ಹಾಗೂ 112 ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ಹಾಗೂ ನೂರಾರು ಜನರು ನಾಪತ್ತೆಯಾಗಿದ್ದಾರೆ. ಸಂತ್ರಸ್ತರನ್ನು ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾಖೈನ್‌ ರಾಜ್ಯದ ಉತ್ತರದಲ್ಲಿ 17 ಮತ್ತು ಚಿನ್ ರಾಜ್ಯದಲ್ಲಿ ನಾಲ್ಕು ಟೌನ್‌ಶಿಪ್‌ಗಳಿಗೆ ಸರ್ಕಾರವು ವಿಪತ್ತು ಘೋಷಣೆಗಳನ್ನು ಹೊರಡಿಸಿದೆ ಎಂದು ಮ್ಯಾನ್ಮಾರ್ ಸರ್ಕಾರಿ ಟೆಲಿವಿಷನ್ MRTV ಮಂಗಳವಾರ ಹೇಳಿದೆ.

- Advertisement -

Related news

error: Content is protected !!