Tuesday, July 21, 2026
spot_imgspot_img
spot_imgspot_img

ಮನೀಶ್‌ ಕುತ್ತಾರ್‌ ಕಥೆ, ಸಾಹಿತ್ಯ, ನಿರ್ದೇಶನದ, ವಿದ್ಯಾನಿಧಿ ಡಾ. ವಿದ್ಯಾಭೂಷಣ್‌ ಗಾಯನದ “ತಲಪಾಡಿದ ದುರ್ಗೆ” ಸಾಂಗ್‌ ಬಿಡುಗಡೆ

- Advertisement -
- Advertisement -

ಪದ್ಮಶ್ರೀ ಪ್ರೊಡಕ್ಷನ್ ನಿರ್ಮಾಣದಲ್ಲಿ ಮೂಡಿ ಬಂದ ತಲಪಾಡಿ ದುರ್ಗೆ ಕನ್ನಡ ಭಕ್ತಿಪ್ರಧಾನ “ತಲಪಾಡಿದ ದುರ್ಗೆ” ವೀಡಿಯೋ ಸಾಂಗ್‌ ಬಿಡುಗಡೆ ಕಾರ್ಯಕ್ರಮ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಸಂಭ್ರಮದ ಕಾರ್ಯಕ್ರಮದಲ್ಲಿ ಮಾರ್ಚ್‌ 16 ರಂದು ನಡೆಯಿತು.

ಮನೀಶ್‌ ಕುತ್ತಾರ್‌ ಕಥೆ, ಸಾಹಿತ್ಯ, ನಿರ್ದೇಶನದ ಈ ಹಾಡಿಗೆ ವಿದ್ಯಾನಿಧಿ ಡಾ. ವಿದ್ಯಾಭೂಷಣ್‌ ರವರು ಧ್ವನಿಯಾಗಿದ್ದಾರೆ. ಸುಮುಖ್‌ ಆಚಾರ್ಯರವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಈ ಹಾಡಿಗೆ ಬಿ ಕೆ ಕ್ರಿಯೇಷನ್ ರವರು ವೀಡಿಯೋಗ್ರಾಫಿ ಮಾಡಿರುತ್ತಾರೆ.

ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು ಛಾಯಾ ಚಿತ್ರಗ್ರಾಹಕರು ಹಾಗೂ ತಂಡದ ಕಲಾವಿದರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮನೀಶ್‌ ಕುತ್ತಾರ್‌ ಯ್ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಗೊಂಡ ಈ ಹಾಡು ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಯೊಂದಿಗೆ ಜನರಿಂದ ಮೆಚ್ಚುಗೆ ಗಳಿಸಿದೆ.

- Advertisement -

Related news

error: Content is protected !!