Friday, June 5, 2026
spot_imgspot_img
spot_imgspot_img

ಐದು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ!

- Advertisement -
- Advertisement -

ಬಾಲಕನೊಬ್ಬನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಕಲಬುರಗಿಯ ಮಿಸ್ಬಾನಗರದಲ್ಲಿ ನಡೆದಿದೆ.

ರಶೀದ್ ಅಶ್ಫಕ್ (5) ಗಾಯಗೊಂಡ ಬಾಲಕನಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಹಾಲು ತರುವಂತೆ ರಶೀದ್ ಅಶ್ಫಕ್​ನನ್ನು ಪೋಷಕರು ಅಂಗಡಿಗೆ ಕಳುಹಿಸಿದ್ದರು. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೀದಿನಾಯಿಗಳು ಏಕಾಏಕಿಯಾಗಿ ರಶೀದ್ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ. ಕಳೆದ ವಾರ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ ನಡೆದಿತ್ತು. ವಾರದಲ್ಲಿ ಎರಡು ಪ್ರಕರಣಗಳು ನಡೆದಿದ್ದರೂ ನಗರ ಪಾಲಿಕೆ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಮಿಸ್ಬಾನಗರ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

- Advertisement -

Related news

error: Content is protected !!