- Advertisement -
- Advertisement -
ವಿಟ್ಲ: ಅನಾರೋಗ್ಯದಿಂದ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ವಿಟ್ಲದ ಮಂಗಿಲಪದವುನಲ್ಲಿ ನಡೆದಿದೆ. ಮಂಗಿಲಪದವು ನಿವಾಸಿ, ಮಂಗಿಲಪದವು ಸಂತೋಷ್ ಬೇಕರಿ ಮಾಲಕ ಕಾಯಿಂಞ ಅವರ ಪುತ್ರಿ ಫಾಯಿಝಾ(20) ಮೃತಪಟ್ಟ ವಿದ್ಯಾರ್ಥಿನಿ.
ಈಕೆ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಪದವಿ ವಿದ್ಯಾರ್ಥಿಯಾಗಿದ್ದಾಳೆ. ಶನಿವಾರ ಇವಳಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಬಳಿಕ ಆಕೆಯನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯ ಮೃತಪಟ್ಟಿದ್ದಾಳೆ.
- Advertisement -