- Advertisement -
- Advertisement -
ವಿಟ್ಲ: ದುಶ್ಚಟದ ಬಗ್ಗೆ ಮನೆಯವರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ೧೦ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡ್ಕಿದು ಗ್ರಾಮದ ಹೇಮಾಜೆಯಲ್ಲಿ ನಡೆದಿದೆ.
ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಇಡ್ಕಿದು ಗ್ರಾಮದ ಹೇಮಾಜೆ ನಿವಾಸಿ ಶರತ್ (೧೬) ಮೃತಪಟ್ಟ ವಿದ್ಯಾರ್ಥಿ.
ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದುದಲ್ಲದೇ ವಿಪರೀತ ಮೊಬೈಲ್ ಬಳಕೆ ಹಾಗೂ ಸಿಗರೇಟ್ ಬೀಡಿ ಸೇದುವ ಚಟವನ್ನು ಬೆಳೆಸಿಕೊಂಡಿದ್ದನೆನ್ನಲಾಗಿದೆ. ಈ ಬಗ್ಗೆ ಮನೆಯವರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಮನೆ ಪಕ್ಕ ಸೌದೆ ತರಲೆಂದು ಹೋದವನು ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -