Wednesday, June 17, 2026
spot_imgspot_img
spot_imgspot_img

ಸುಬ್ರಮಣ್ಯ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳವು..!

- Advertisement -
- Advertisement -

ಸುಬ್ರಮಣ್ಯ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರದಲ್ಲಿ ನಡೆದಿದೆ.

ಕೊಲ್ಲಮೊಗ್ರದಲ್ಲಿ ಸೆಲೂನ್ ಹೊಂದಿರುವ ಚಾಂತಾಳ ನಿವಾಸಿ ಸುರೇಶ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಸುರೇಶ್ ಅವರ ಪುತ್ರ ಸಂಜೆ ಮನೆಗೆ ಬೀಗ ಹಾಕಿ ತಾಯಿ ನಡೆಸುತ್ತಿರುವ ದಿನಸಿ ಅಂಗಡಿಗೆ ಬಂದಿದ್ದರು. ರಾತ್ರಿ 8 ಗಂಟೆಗೆ ಅಂಗಡಿ ಬಂದ್ ಮಾಡಿ ಮನೆಗೆ ಹೋದಾಗ ಮನೆಯ ಬೀಗ ಒಡೆದಿರುವುದು ಕಂಡುಬಂದಿದೆ.

ಬೆಡ್ ರೂಂನಲ್ಲಿರುವ ಕಪಾಟಿನ ಬಾಗಿಲು ಒಡೆದು ಅದರಲ್ಲಿದ್ದ ಸುಮಾರು ಎರಡರಿಂದ ಮೂರು ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯ ಪೊಲೀಸರು ರಾತ್ರಿಯೇ ಬಂದು ಸ್ಥಳ ತನಿಖೆ ಮಹಜರು ನಡೆಸಿದ್ದಾರೆ.

- Advertisement -

Related news

error: Content is protected !!