Tuesday, May 7, 2024
spot_imgspot_img
spot_imgspot_img

ಇಂತಹ ಆರೋಗ್ಯಕಾರಿ ಆಹಾರಗಳು, ಮನುಷ್ಯನಿಗೆ ಕ್ಯಾನ್ಸರ್ ಕಾಯಿಲೆ ಬರದಂತೆ ತಡೆಗಟ್ಟುತ್ತದೆ!

- Advertisement -G L Acharya panikkar
- Advertisement -

ದೇಹದೊಳಗೆ ಕ್ಯಾನ್ಸರ್ ಜೀವಕೋಶಗಳ ಅಭಿವೃದ್ಧಿ ಆಗದಂತೆ ತಡೆಯುವ ಔಷಧಿ ಇನ್ನೂ ಕೂಡ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ಜೀವನಶೈಲಿ ಹಾಗೂ ಆಹಾರಪದ್ಧತಿಯಲ್ಲಿ ನಾವು ಬದಲಾವಣೆಗಳನ್ನು ಮಾಡಿಕೊಂಡರೆ ಮಾತ್ರ, ಕ್ಯಾನ್ಸರ್ ಸಮಸ್ಯೆಗೆ ಗುರಿಯಾಗುವ ಸಾಧ್ಯತೆಯಿಂದ ಪಾರಾಗಬಹುದು.

ಸಿಟ್ರಸ್ ಹಣ್ಣುಗಳಾಗಿರುವಂತಹ ಮೂಸಂಬಿ, ಕಿತ್ತಳೆ, ಸೇಬೆ ಹಣ್ಣುಗಳಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ತಡೆಯ ಬಲ್ಲ ಆರೋಗ್ಯಕಾರಿ ಗುಣಲಕ್ಷಣಗಳು ಕಂಡುಬರುವುದರಿಂದ ಎರಡು ದಿನಕ್ಕೆ ಒಮ್ಮೆಯಾದರೂ, ಇಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಅಥವಾ ಇದರ ಜ್ಯೂಸ್ ಮಾಡಿ ಕುಡಿಯುವುದರಿಂದ, ಕ್ಯಾನ್ಸರ್ ಅಪಾಯದಿಂದ ದೂರ ಉಳಿಯಬಹುದು ಎಂದು ಜಪಾನ್ ನಲ್ಲಿ ನಡೆಸಿರುವಂತಹ ಅಧ್ಯಯನಗಳು ಹೇಳಿವೆ.

ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಕಿತ್ತಳೆ ಹಣ್ಣಿನಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶದ ಜೊತೆಗೆ, ಫೈಟೋ ಕೆಮಿ ಕಲ್ ಅಂಶಗಳು ಕೂಡ ಯಥೇಚ್ಛವಾಗಿ ಸಿಗುತ್ತದೆ. ಇವೆರಡೂ ಆರೋಗ್ಯಕಾರಿ ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾ ಡುವ ಗುಣ ಪಡೆದಿದೆ.ಅದರಲ್ಲೂ ಪ್ರಮುಖವಾಗಿ ಶ್ವಾಸಕೋಶದ ಕ್ಯಾನ್ಸರ್, ಸ್ತನಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಹಾಗೂ ಚರ್ಮದ ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ​

ಸೂರ್ಯಕಾಂತಿ ಬೀಜಗಳಲ್ಲಿ ಕಂಡು ಬರುವ ವಿಟಮಿನ್ ಇ ಅಂಶ, ಜಿಂಕ್ ಹಾಗೂ ಸೆಲೆನಿಯಂ ಅಂಶಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಪ್ರಮುಖವಾಗಿ ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಗಡ್ಡೆ ಉಂಟಾಗದಂತೆ ತಡೆಯುವುದು ಮಾತ್ರವಲ್ಲದೆ, ದೀರ್ಘಕಾಲದಲ್ಲಿ ಯಾವುದೇ ಕಾಯಿಲೆಗಳು ಕಂಡು ಬರದಂತೆ ನೋಡಿಕೊಂಡು, ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ.​

ಬೆಣ್ಣೆಹಣ್ಣು ಅಥವಾ ಅವಕಾಡೊ ಇದು ಪೋಷಕಾಂಶಗಳನ್ನು ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಒಳಗೊಂಡಿದೆ. ಪ್ರಮುಖವಾಗಿ ಈ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಇ ಅಂಶ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ನಮ್ಮನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ

ಬಾದಾಮಿ ಬೀಜಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್, ಕರಗುವ ನಾರಿನಾಂಶ, ಮೆಗ್ನೀಶಿಯಂ, ವಿಟಮಿನ್ ಇ ಹಾಗೂ ಇತರ ಪೋಷಕಾಂಶಗಳು ಹೇರಳವಾಗಿ ಸಿಗುವು ದರಿಂದ, ದಿನಾ ಮೂರು-ನಾಲ್ಕು ಬಾದಾಮಿ ಬೀಜಗಳನ್ನು ನೆನೆಸಿಟ್ಟು ಸೇವನೆ ಮಾಡುವುದರಿಂದ ಕ್ಯಾನ್ಸರ್ ಕಾಯಿಲೆಯ ಹಾವಳಿಯಿಂದ ದೂರವಿರಬಹುದು.
ಇನ್ನು ಅಧ್ಯಾಯನದ ವರದಿಯ ಪ್ರಕಾರ ಸುಮಾರು ಬಾದಾಮಿ ಬೀಜ ಗಳಲ್ಲಿ ಕಂಡು ಬರುವ ವಿಟಮಿನ್ ಇ ಅಂಶವು ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳವಣಿಗೆ ಆಗದಂತೆ ತಡೆಯುತ್ತ ದೆಯಂತೆ. ಇನ್ನು ಟೀ ಕಾಫಿ ಕುಡಿಯುವ ಬದಲು, ಬಾದಾಮಿ ಹಾಲನ್ನು ಕುಡಿಯುವ ಅಭ್ಯಾಸ ಮಾಡಿ ಕೊಂಡರೂ ಕೂಡ, ಆರೋಗ್ಯ ಲಾಭವನ್ನು ಪಡೆದು ಕೊಳ್ಳಹುದು.​

ಬೀಟ್ರೂಟ್ ಎಷ್ಟು ಆರೋಗ್ಯಕಾರಿಯೋ, ಅಂತೆಯೇ ಈ ತರಕಾ ರಿಯ ಎಲೆಗಳು ಕೂಡ ಅಷ್ಟೇ ಆರೋಗ್ಯಕ್ಕಾರಿ. ಸುಮಾರು 100 ಗ್ರಾಂ ಬೀಟ್ರೂಟ್ ಎಲೆಗಳಲ್ಲಿ 1.81 ಮಿಲಿಗ್ರಾಂ ವಿಟಮಿನ್ ಇ ಅಂಶ ಕಂಡುಬರುವುದರಿಂದ, ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡುವ ಎಲ್ಲಾ ಗುಣಲಕ್ಷಣಗಳು ಕೂಡ, ಈ ಸೊಪ್ಪಿನಲ್ಲಿ ಕಂಡು ಬರುತ್ತದೆ.

- Advertisement -

Related news

error: Content is protected !!