Thursday, June 18, 2026
spot_imgspot_img
spot_imgspot_img

ವಿದೇಶಾಂಗ ಸಚಿವಾಲಯ ಸಲಹಾ ಸಮಿತಿ ಸದಸ್ಯರಾಗಿ ಸುಧಾಕರ್ ನೇಮಕ

- Advertisement -
- Advertisement -

ಚಿಕ್ಕಬಳ್ಳಾಪುರ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ಸಂಸದ ಡಾ.ಕೆ.ಸುಧಾಕರ್ ಅವರು ನೇಮಕಗೊಂಡಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಹಾಗೂ ವಿದೇಶಾಂಗ ಖಾತೆ ರಾಜ್ಯ ಸಚಿವರಾದ ಕೀರ್ತಿವರ್ಧನ್ ಸಿಂಗ್, ಪವಿತ್ರಾ ಮಾರ್ಗರೀಟಾ ಅವರ ನೇತೃತ್ವದ ಈ ಸಲಹಾ ಸಮಿತಿಯಲ್ಲಿ ಲೋಕಸಭೆಯ 10 ಹಾಗೂ ರಾಜ್ಯಸಭೆಯ 9 ಸದಸ್ಯರು, ರಾಜ್ಯಸಭೆಯಿಂದ ಒಬ್ಬರು ವಿಶೇಷ ಆಹ್ವಾನಿತ ಸದಸ್ಯರು ಮತ್ತು ಇಬ್ಬರು ಮಾಜಿ ಅಧಿಕಾರಿಗಳು ಸದಸ್ಯರಾಗಿ ನೇಮಕ ಮಾಡಲಾಗುತ್ತದೆ.

ಈ ಸಲಹಾ ಸಮಿತಿಯು ಸರ್ಕಾರದ ವಿದೇಶಾಂಗ ನೀತಿ, ವಿವಿಧ ಯೋಜನೆ, ಕಾರ್ಯಕ್ರಮ ಅನುಷ್ಠಾನದ ವಿಧಾನ ಹಾಗೂ ದೇಶದ ವಿದೇಶಾಂಗಕ್ಕೆ ಸಂಬಂಧಿಸಿದ ವಿಚಾರ ಕುರಿತು ಪರಾಮರ್ಶಿಸಲಿದೆ ಹಾಗೂ ಸೂಕ್ತ ಸಲಹೆ, ಸೂಚನೆ ನೀಡಲಿದೆ.

- Advertisement -

Related news

error: Content is protected !!