Sunday, May 5, 2024
spot_imgspot_img
spot_imgspot_img

ವಿಟ್ಲ: ಉಕ್ಕುಡದ ಗಯನ್ ಆರ್ಕೇಡ್‌ನಲ್ಲಿ ಸುಧರ್ಮ ಆಯುರ್ವೇದ ಹಾಗೂ ಪಂಚಕರ್ಮ ಚಿಕಿತ್ಸಾಲಯ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ಸುಧರ್ಮ ಆಯುರ್ವೇದ ಹಾಗೂ ಪಂಚಕರ್ಮ ಚಿಕಿತ್ಸಾಲಯವು ಉಕ್ಕುಡದ ಗಯನ್ ಆರ್ಕೇಡ್‌ನಲ್ಲಿ ಸಮಾರಂಭಗೊಂಡಿತ್ತು.

ಮಂಗಳೂರು ಹಿರಿಯ ಆಯುರ್ವೇದ ತಜ್ಞ ಡಾ. ಮೋಹನ್ ಕಿಶೋರ್‍ ದೀಪಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು. ಅತಿಥಿಗಳಾಗಿ ಹಿಂದೂ ಮುಖಂಡ ಅರುಣ್ ಕುಮಾರ್‍ ಪುತ್ತಿಲ, ಪುತ್ತೂರು ಖ್ಯಾತ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ, ಕೃಷ್ಣಯ್ಯ ವಿ.ಕೆ ಅರಮನೆ ವಿಟ್ಲ, ಸುಧರ್ಮ ಆಯುರ್ವೇದ ಹಾಗೂ ಪಂಚಕರ್ಮ ಚಿಕಿತ್ಸಾಲಯದ ಡಾ. ಧನಂಜಯ ಹಂದೆ ಭಾಗವಹಿಸಿದರು.

ಸೇವೆಗಳು

  • ಪರಿಣಿತ ವೈದ್ಯರುಗಳಿಂದ ಸೂಕ್ತ ತಪಾಸಣೆ, ಸಲಹೆ ಹಾಗೂ ಚಿಕಿತ್ಸೆಗಳು, ಆಸಿಡಿಟಿ, ತಲೆನೋವು, ಅಜೀರ್ಣ, ಮೂಲವ್ಯಾಧಿ, ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಮೊಡವೆ, ಚರ್ಮರೋಗಗಳು, ಮಲಬದ್ದತೆ, ಸೈನಸ್ ತೊಂದರೆಗಳು, ತಲೆಕೂದಲು ಉದುರುವಿಕೆ, ರಕ್ತಹೀನತೆ, ಮುಟ್ಟಿನ ತೊಂದರೆಗಳು, ಬಿಳಿಸೆರಗು, ಬೊಜ್ಜು, ತಲೆಹೊಟ್ಟು ಇತ್ಯಾದಿ ರೋಗಗಳಿಗೆ ಪರಿಣಾಮಕಾರಿ ಔಷಧಿಗಳು.
  • ಕುತ್ತಿಗೆ, ಕೈ, ಭುಜ, ಮೊಣಕೈ ನೋವುಗಳು, ಸೊಂಟನೋವು, ಮೊಣಗಂಟು ನೋವುಗಳು, ಕೈಕಾಲು ಬಲ ಕಳೆದುಕೊಳ್ಳುವುದು, ಕೈಕಾಲು ಮರಗಟ್ಟುವಿಕೆ, ಪಕ್ಷವಾತ, ಸಯಾಟಿಕ, spodylosisನಂತಹ ಡಿಸ್ಕ್‌ ತೊಂದರೆಗಳು ಹಾಗೂ ಇತರ ಹಲವು ವಾತ ರೋಗಗಳು, ನಿದ್ರಾಹೀನತೆ, ರಕ್ತದೊತ್ತಡ ಮೊದಲಾದ ರೋಗಗಳಿಗೆ ಸೂಕ್ತ ಪಂಚಕರ್ಮ ಚಿಕಿತ್ಸೆಗಳು.
  • ಸುಖಕರ, ಆರಾಮದಾಯಕ ಚಿಕಿತ್ಸೆಗಳಾದ Body Massage, Head Massage and Steam Bath ಇತ್ಯಾದಿಗಳು.
  • ಮಕ್ಕಳ ಆರೋಗ್ಯ ಪಾಲಿಕೆಗಾಗಿ ಹಾಗೂ ಚಿಕಿತ್ಸೆಗಳಿಗಾಗಿ ಖ್ಯಾತ ಮಕ್ಕಳ ರೋಗ ತಜ್ಞರಿಂದ ಸೂಕ್ತ ಸಲಹೆ, ತಪಾಸಣೆ ಹಾಗೂ ಚಿಕಿತ್ಸೆಗಳು.
  • ಪ್ರತೀ ತಿಂಗಳ ಪುಷ್ಯಾ ನಕ್ಷತ್ರದ ದಿನ ಮಕ್ಕಳಿಗೆ ಸ್ವರ್ಣಪ್ರಾಶನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -

Related news

error: Content is protected !!