- Advertisement -
- Advertisement -
ಕುಂದಾಪುರ : ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದ 10ನೇ ತರಗತಿಯ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. ಕೊರೋನಾ ಭೀತಿ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.

ಮೃತ ವಿದ್ಯಾರ್ಥಿಯ ತಾಯಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿದ್ದ ಮನೆ ಮಾಲಿಕರಿಗೆ ಕೋವಿಡ್ ಪತ್ತೆಯಾಗಿತ್ತು. ಆ ಬಳಿಕ ಮೃತ ವಿದ್ಯಾರ್ಥಿ ಕಾರ್ತಿಕ್ ಮತ್ತು ಆತನ ತಾಯಿಯನ್ನು ಅವರ ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು.

ಕಾರ್ತಿಕ್ ಮತ್ತು ಆತನ ತಾಯಿ ಕಳೆದ ಏಳು ದಿನಗಳಿಂದ ಮನೆಯಲ್ಲೇ ಇದ್ದು ಈ ನಡುವೆ ಮನೆಯಿಂದ ಹೊರಬರಲಾಗದೆ ಕಾರ್ತಿಕ್ ಬಹಳ ನೊಂದಿದ್ದ ಜೊತೆಗೆ ಕೋವಿಡ್ ಕುರಿತೂ ಭೀತಿಗೊಂಡಿದ್ದ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
- Advertisement -