Monday, June 15, 2026
spot_imgspot_img
spot_imgspot_img

ಕಾರ್ಕಳ: ಸಾಲಬಾಧೆಗೆ ಮನನೊಂದ ವ್ಯಕ್ತಿ ಆತ್ಮಹತ್ಯೆ.!

- Advertisement -
- Advertisement -

vtv vitla
vtv vitla

ಕಾರ್ಕಳ : ಸಾಲಬಾಧೆಯಿಂದ ಮನನೊಂದು ವಾದ್ಯಗಾರಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ನಂದಳಿಕೆ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನಂದಳಿಕೆ ಗ್ರಾಮದ ಮಂಜುನಾಥ ದೇವಾಡಿಗ(43) ಎಂದು ಗುರುತಿಸಲಾಗಿದೆ. ಮಂಜುನಾಥ ಅವರು ವಾದ್ಯಗಾರಿಕೆ ಕೆಲಸ ಮಾಡುತ್ತಿದ್ದು ಒಂದು ವರ್ಷದಿಂದ ನಂದಳಿಕೆಯಲ್ಲಿ ಹೊಸ ಮನೆ ಮಾಡಿ ವಾಸವಾಗಿದ್ದರು. ನ.18 ರಂದು ಮಧ್ಯಾಹ್ನ 2 ಗಂಟೆಗೆ ಮಿಯಾರಿನ ಮನೆಗೆ ಬಂದು ಬಜಗೋಳಿಗೆ ಹೋಗುವುದಾಗಿ ತಾಯಿ ವಾರಿಜಾರವರಲ್ಲಿ ಹೇಳಿಹೋದವರು ವಾಪಾಸು ಮನೆಗೂ ಬಾರದೇ ನಂದಳಿಕೆಯ ಮನೆಗೂ ಹೋಗದ ಕಾರಣ ಹುಡುಕಾಡಿದಾಗ ಮನೆಯ ಒಂದು ಕಿ.ಮೀ ದೂರದಲ್ಲಿ ಮಿಯಾರು ಹೊಳೆಯ ಸಮೀಪ ಹಾಡಿಯಲ್ಲಿ ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮನೆ ಮಾಡಿದ ಸಾಲ ಬಾಕಿ ಇರುವುದಾಗಿ ಚಿಂತೆಯಲ್ಲಿದ್ದರು. ಇದರೊಂದಿಗೆ ಮಧ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!